ಕಾಸರಗೋಡು: ಬ್ಯಾಂಕ್ನ ಅಪ್ರೈಸರ್ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ಪೆರ್ನಡ್ಕ ಪುಷ್ಪ ನಿಲಯದ ಬಿ.ಎಂ. ಗಿರೀಶ್ ಕುಮಾರ್ ಆಚಾರ್ಯ (48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆಗೆ ಅಡ್ಕತ್ತಬೈಲು ರೈಲು ಹಳಿಯಲ್ಲಿ ಇವರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿ ಯಂತೆ ಪೊಲೀಸರು ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ.ಗಿರೀಶ್ ಕುಮಾರ್ ಕೆನರಾ ಬ್ಯಾಂಕ್ನ ಪಳ್ಳಿಕೆರೆ ಶಾಖೆಯಲ್ಲಿ ಅಪ್ರೈಸರ್ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ತಂದೆ ಬಿ.ಎಂ. ಹರೀಶ್ಚಂದ್ರ ಆಚಾರ್ಯ, ತಾಯಿ ಪುಷ್ಪಲತ, ಪತ್ನಿ ಮಮತ ಗೌರಿ, ಪುತ್ರಿ ನಮೃತ (ವಿದ್ಯಾರ್ಥಿನಿ), ಸಹೋ ದರರಾದ ಚರಣ್ಕುಮಾರ್, ಲಕ್ಷ್ಮೀಶ, ಸದಾನಂದ, ಸಹೋದರಿಯರಾದ ಅನುರಾಧ, ಹೇಮಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ದೀಕ್ಷಿತ್ ಈ ಹಿಂದೆ ನಿಧನ ಹೊಂದಿದ್ದಾರೆ.






