ಪ್ರಾಮಾಣಿಕತೆ ಮೆರೆದ ಜಯರಾಮ್‌ರಿಗೆ ಬ್ಯಾಂಕ್‌ನಿಂದ ಅಭಿನಂದನೆ

ಪೆರ್ಮುದೆ: ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಎಟಿಎಂನಲ್ಲಿ ತಾಂತ್ರಿಕ ಅಡಚಣೆಯಿಂದಾಗಿ ನಾಲ್ಕು ಪಟ್ಟು ಹೆಚ್ಚು ಹಣ ಜನರ ಕೈಸೇರುತ್ತಿರುವುದನ್ನು ಪತ್ತೆಹಚ್ಚಿದ ಸ್ಥಳೀಯ ನಿವಾಸಿ ಕೋಳಾರು ಜಯರಾಮ್‌ರನ್ನು ಬ್ಯಾಂಕ್‌ನ ವತಿಯಿಂದ ಅಭಿನಂದಿಸಲಾಗಿದೆ. ಎಟಿಎಂನಿಂದ ಹಣ ತೆಗೆಯುವಾಗ ತಾಂತ್ರಿಕ ದೋಷದಿಂದ ನಾಲ್ಕು ಪಟ್ಟು ಹೆಚ್ಚು ಹಣ ಲಭಿಸುತ್ತಿತ್ತೆನ್ನಲಾಗಿದೆ. ಆದರೆ ಇದನ್ನು ಯಾರೂ ಬ್ಯಾಂಕ್‌ಗೆ ತಿಳಿಸಿರಲಿಲ್ಲ. ಜಯರಾಮ್ ಹಣ ತೆಗೆದಾಗ ಇವರಿಗೂ ಇದೇ ಅನುಭವ ಉಂಟಾಗಿದ್ದು, ಇವರು ಕೂಡಲೇ ಬ್ಯಾಂಕ್‌ನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇವರ ಪ್ರಮಾಣಿಕತೆಯನ್ನು ಮೆಚ್ಚಿದ ಬ್ಯಾಂಕ್ ಅಧಿಕಾರಿಗಳು ಪಂಚಾಯತ್ ಸದಸ್ಯರನ್ನು ಕರೆದು ಇವರನ್ನು ಅಭಿನಂದಿಸಿದ್ದಾರೆ.

You cannot copy contents of this page