ಕುಂಬಳೆ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಬ್ಯಾಂಕ್‌ನ ರಾತ್ರಿ ಕಾವಲುಗಾರನನ್ನು ವ್ಯಕ್ತಿಯೋರ್ವ ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ದೂರಲಾಗಿದೆ. ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ರಾತ್ರಿ ಕಾವಲುಗಾರನಾದ ವರ್ಕಾಡಿ ಕಳಿಯೂರಿನ ಅಭಿಷೇಕ್ (24) ಎಂಬವರು ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ರಾತ್ರಿ 9.45ಕ್ಕೆ ಕರ್ತವ್ಯಕ್ಕಾಗಿ ಬ್ಯಾಂಕ್‌ಗೆ ಮನೆಯಿಂದ ತೆರಳುತ್ತಿದ್ದಾಗ ಕಳಿಯೂರು ಸಮೀಪ ವ್ಯಕ್ತಿಯೋರ್ವ ತಡೆದು ನಿಲ್ಲಿಸಿ ಹಲ್ಲೆ ಗೈದಿರುವುದಾಗಿ ಅಭಿಷೇಕ್ ದೂರಿದ್ದಾರೆ.







