ಕಾಸರಗೋಡು: ಬ್ಯೂಟಿ ಪಾರ್ಲ ರ್‌ಗಳನ್ನು ಯೂಸರ್ ಫೀಸ್‌ನಿಂದ ಹೊರತುಪಡಿಸಬೇಕೆಂದು ಕೆಎಸ್‌ಬಿಎ ಲೇಡಿ ಬ್ಯೂಟೀಶ್ಯನ್ ಅಸೋಸಿ ಯೇಶನ್ ಜಿಲ್ಲಾ ಸಮ್ಮೇಳನ ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ತರಬೇತಿ, ಲೈಸನ್ಸ್ ಇಲ್ಲದೆ ಈ ರಂಗದಲ್ಲಿ ಕಾರ್ಯಾ ಚರಿಸುವವರಿಗೆ ನಿಯಂತ್ರಣ ಹೇರಬೇ ಕೆಂದೂ ಸಮ್ಮೇಳನ ಒತ್ತಾಯಿಸಿದೆ.
ಕುಂಬಳೆಯಲ್ಲಿ ನಡೆದ ಸಮ್ಮೇಳನವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ನೆರಿನ್ ಜೋನ್ಸನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷೆ ಸುನಿತ ಕುಲಾಲ್ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪೂರ್ಣಿಮ, ಕೆಎಸ್‌ಬಿಎ ರಾಜ್ಯ ಕಾರ್ಯದರ್ಶಿ ಪಿ.ಕೆ.ಮಧು, ರಾಜ್ಯ ಅಧ್ಯಕ್ಷ ಶ್ಯಾಮ ನಾಯರ್,ಯೋಗಿತ ರಾಣಿ, ರೇವತಿ, ಆರ್. ರಮೇಶನ್, ವೀರ, ಸತ್ಯನಾರಾ ಯಣ ಎಂ, ಗೋಪಿ, ಪುಷ್ಪ, ಸ್ನೇಹ, ಸರಿತ ಶೆಟ್ಟಿ, ಹರ್ಷಿತ ಮಾತನಾಡಿದರು. ನೂತನ ಪದಾಧಿಕಾರಿ ಗಳಾಗಿ ಪೂರ್ಣಿಮ (ಅಧ್ಯಕ್ಷೆ), ಸುಮಿತ್ರ (ಕಾರ್ಯದರ್ಶಿ), ಶಿಲ್ಪ ಕುಮಾರಿ (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು. ಬಳಿಕ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಿತು.







