ಉಪ್ಪಳ: ಬಾಯಾರು ಸುದೆಂಬಳ ನಿವಾಸಿ ಬೀಡಿ ಗುತ್ತಿಗೆದಾರ ತಿಮ್ಮಪ್ಪ ದೇವಾಡಿಗ (68) ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಹಿರಿಯ ಕೃಷಿಕರೂ ಆದ ಇವರು ಟೆಲಿಫೋನ್ ಬೀಡಿ ಗುತ್ತಿಗೆದಾರರಾಗಿದ್ದರು. ದಿವಂಗತರಾದ ನಾರಾಯಣ ದೇವಾಡಿಗ- ಸೀತಾ ದಂಪತಿಯ ಪುತ್ರನಾದ ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಹರ್ಷಿತ್, ದೀಪಿಕ, ದೇವಿಕ, ರಕ್ಷಿತ್, ಅಳಿಯಂದಿರಾದ ಮೋಹನ, ಶೈಲೇಶ್, ಸಂದೀಪ್, ಸಹೋದರ ಅಚ್ಯುತ, ಸಹೋದರಿಯರಾದ ಲೀಲ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







