ಮಂಜೇಶ್ವರ: ಮಂಜೇಶ್ವರ ಏರಿಯಾ ಬೀಡಿ ಕಾರ್ಮಿಕರ ಯೂನಿಯನ್ (ಸಿ ಐ ಟಿ ಯು) ನೇತೃತ್ವದಲ್ಲಿ ಬೀಡಿ ಕಾರ್ಮಿಕರನ್ನು ಸಂರಕ್ಷಿಸಬೇಕು, ಬೀಡಿ ಕಾರ್ಮಿ ಕರನ್ನು ಇಎಸ್ಐ ಯೋಜನೆಯಲ್ಲಿ ಒಳಗೊಳ್ಳಿಸಬೇಕು, ಬೀಡಿ ಸಿಗಾರ್ ಕಾನೂನನ್ನು ಪುನಸ್ಥಾಪಿಸಬೇಕು, ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನೆ ನಿಗದಿಪಡಿಸಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಕಚೇರಿಯಾದ ಮಂಜೇಶ್ವರ ಪೋಸ್ಟ್ ಆಫೀಸ್ ಗೆ ಪ್ರತಿಭಟನೆ ಮಾರ್ಚ್ ನಡೆಸಲಾಯಿತು.ಪ್ರತಿಭಟನೆ ಸಭೆಯನ್ನು ರೈತ ಸಂಘ ರಾಜ್ಯ ಸಮಿತಿ ಸದಸ್ಯ, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್. ಜಯಾನಂದ ಉದ್ಘಾ ಟಿಸಿದರು. ಬೀಡಿ ಯೂನಿಯನ್ ಮಂಜೇಶ್ವರ ಏರಿಯಾ ಪ್ರಸಿಡೆಂಟ್ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದರು.ಮಂಜೇಶ್ವರ ಏರಿಯಾ ಬೀಡಿ ಯೂನಿಯನ್ ಕಾರ್ಯದರ್ಶಿ ಬೇಬಿ ಶೆಟ್ಟಿ ಸ್ವಾಗತಿಸಿದರು.
