ಕಾಸರಗೋಡು: ರಾಜ್ಯ ಲೋಕೋ ಪಯೋಗಿ ಇಲಾಖೆ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಇಂದು ಸಂಜೆ ಜಿಲ್ಲೆಗೆ ತಲುಪುವರು. ಬೇಕಲ ಬೀಚ್ ಪಾರ್ಕ್‌ನಲ್ಲಿ ಈ ತಿಂಗಳ 31ರವರೆಗೆ ನಡೆಯಲಿರುವ ಬೇಕಲ್ ಇಂಟರ್ ನ್ಯಾಶನಲ್ ಬೀಚ್ ಫೆಸ್ಟಿವ ಲ್‌ನ್ನು ಅವರ ಉದ್ಘಾಟಿಸುವರು. ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸುವರು. ಬೇಕಲಕೋಟೆಯನ್ನು ಹಿನ್ನೆಲೆಯಾಗಿ ಚಿತ್ರೀಕರಿಸಿ ನಿರ್ಮಿಸಿದ ಬಾಂಬೆ ಸಿನಿಮಾದ ನಿರ್ದೇಶಕ ಮಣಿರತ್ನ, ಸಿನಿಮಾ ನಟಿ ಮನಿಷಾ ಕೊಯಿರಾಲ, ಛಾಯಾಗ್ರಾಹಕ ರಾಜೀವ್ ಮೆನೊನ್ ಎಂಬಿವರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದು, ಇವರು ಈಗಾಗಲೇ ಬೇಕಲಕೋಟೆಗೆ ತಲುಪಿದ್ದಾರೆ.







