ಬೆಳ್ಳೂರು: ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್‌ನ 3035-26ನೇ ವರ್ಷದ ಮಹಾಸಭೆ ಇತ್ತೀಚೆಗೆ ಜರಗಿತು. ಬ್ಯಾಂಕ್‌ನ ಅಧ್ಯಕ್ಷ ವಿ. ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾಯ ಓಲಸರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2025-26ನೇ ವರ್ಷದಲ್ಲಿ ಬ್ಯಾಂಕ್ 149.13 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ. ಸದ್ರಿ ವರ್ಷದಲ್ಲೂ ಬ್ಯಾಂಕ್‌ನ ಲಾಭವನ್ನು ಹೊಂದಿ ಕೊಂಡು ಸದಸ್ಯರಿಗೆ ಲಾಭದ ೧೦ ಶೇ. ಡಿವಿಡೆಂಟ್ ವಿತರಿಸು ವುದಾಗಿ ಘೋಷಿಸಿದರು. ಬ್ಯಾಂಕ್‌ನ ಕಾರ್ಯದರ್ಶಿ ಉದಯ ಕುಮಾರ್ ಎನ್ ವಾರ್ಷಿಕ ವರದಿ ಮಂಡಿಸಿದರು. ಆರ್ ಎಂಡ್ ಡಿ ಮತ್ತು ಎಸ್ಟಿಮೇಟ್ ಬಜೆಟ್‌ನ್ನು ಅಸಿಸ್ಟೆಂಟ್ ಸೆಕ್ರೆಟರಿ ರಾಜೇಶ್ ಮಂಡಿಸಿದರು. ನಿರ್ದೇಶಕ ರಾದ ಸುಂದರ್ ರೈ, ಮುರಳೀಧರ ಬೋಗಲ್ಕರ್, ಆಶೀರ್ವಾದ್, ಮುರಳೀಧರ ಎಸ್, ಅಶೋಕ ಎಂ, ಗೋಪಾಲನ್, ಶ್ಯಾಮಲ ಎಂ ಬಲ್ಲಾಳ್, ಚಂದ್ರಕಲಾ, ಪ್ರಶಾಂತಿ ಪಿ ನಾಯ್ಕ್ ಶುಭಾಶಂಸನೆಗೈದರು. ಬ್ಯಾಂಕ್‌ನ ಉಪಾಧ್ಯಕ್ಷ ಜಯರಾಜ ರೈ ಎಡಮುಗೆರು ಸ್ವಾಗತಿಸಿ, ನಿರ್ದೇಶಕ ಗೋಪಾಲನ್ ವಂದಿಸಿದರು.






