ಕಾಸರಗೋಡು: ನಗರದ ಬಿಇಎಂ ಶಾಲೆಯ ಕಲೋತ್ಸವವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಕೆ.ಆರ್ ಹಾಗೂ ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಜಂಟಿಯಾಗಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯೋ ಪಾಧ್ಯಾಯ ಗಣೇಶ್ ಕೆ ಅಧ್ಯಕ್ಷತ ವಹಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕ್ರಟಮಣ ಹೊಳ್ಳ, ಎಂಪಿಟಿಎ ಅಧ್ಯಕ್ಷೆ ಚೇತನ, ಪಿಟಿಎ ಉಪಾಧ್ಯಕ್ಷ ಕಿಶೋರ್ ಎಸ್ವಿಟಿ, ಕಲೋತ್ಸವ ಕನ್ವೀನರ್ ಸ್ಮಿತಾ ಸಿರಿಯಾಕ್ ಯಶವಂತ ಮಾಸ್ತರ್, ರೋಹಿತಾಕ್ಷಿ ಟೀಚರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯರು ಪ್ರಾರ್ಥನೆ ಹಾಡಿದರು. ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ವಿಶಾಲಾಕ್ಷಿ ಬಿ.ಎ ವಂದಿಸಿದರ. ಶೆರ್ಲಿ ಟೀಚರ್ ನಿರೂಪಿಸಿದರು.






