ಕಾಸರಗೋಡು: ಶಾಲಾ ಕಾಲೇಜು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳನ್ನು ಬೆಲೆಗೆ ಖರೀದಿಸಿ ಅದನ್ನು ವಂಚನಾ ಕೃತ್ಯಗಳಿಗಾಗಿ ಉಪಯೋಗಿಸುವ ಜಾಲ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯವೆಸಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದ್ದು ಅದರಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳ ಹಾಗೂ ಇತರ ಮಕ್ಕಳ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರು ನೀಡಿದ ನಿರ್ದೇಶ ಪ್ರಕಾರ ಪೊಲೀಸರು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ.
ಶಾಲಾ ಕಾಲೇಜು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಮಾಹಿತಿಗಳು ಮತ್ತು ಅವರ ಎಟಿಎಂ ಕಾರ್ಡ್‌ಗಳನ್ನು ಸೈಬರ್ ವಂಚಕ ಜಾಲದವರು ಹಣ ನೀಡಿ ಸ್ವಂತಗೊಳಿಸಿ ಅದನ್ನು ದುರುಪಯೋಗಗೈದು ಅದನ್ನು ಆನ್‌ಲೈನ್ ವಂಚನೆಗಳಿಗೆ ಉಪಯೋಗಿಸುತ್ತಿ ದ್ದಾರೆ. ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಗಳು ಎಟಿಎಂ ಇತ್ಯಾದಿಗಳನ್ನು ವಂಚನೆಗಾಗಿ ಇಂತಹ ಜಾಲದವರು ಬಳಸುತ್ತಿದ್ದಾರೆ ಎಂಬ ಸತ್ಯವನ್ನು ಅರಿ ಯದ ವಿದ್ಯಾರ್ಥಿಗಳೂ ಅವರು ಮಾಡದ ತಪ್ಪಿಗಾಗಿ ಅವರು ಕೂಡಾ ಇಂತಹ ವಂಚನಾ ಜಾಲದಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇದೆ. ಹೀಗೆ ಬಾಡಿಗೆಗೆ ವಿದ್ಯಾರ್ಥಿ ಗಳ ಬ್ಯಾಂಕ್ ಖಾತೆಗಳ ಮಾಹಿತಿ ಮತ್ತು ಎಟಿಎಂನ್ನು ಪಡೆಯುವ ವಂಚಕರು ಅದಕ್ಕಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನಿಗದಿತ ಮೊತ್ತದ ಹಣವನ್ನು ಬಾಡಿಗೆ ರೂಪದಲ್ಲಿ ನೀಡುತ್ತಾರೆ. ಸೈಬರ್ ಸೆಲ್ ಪೊಲೀಸರು ನಡೆಸಿದ ತನಿಖೆಯಲ್ಲಿ ಹೀಗೆ ಅನೇಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಈ ರೀತಿ ಹಣ ಬಂದಿರುವುದನ್ನು ಪತ್ತೆಹಚ್ಚಿದ್ದಾರೆ. ವಿದ್ಯಾರ್ಥಿಗಳು ಅದನ್ನು ತಮ್ಮ ಪೋಕೆಟ್ ಮನಿಗಾಗಿ ಬಳಸುತ್ತಾರೆ. ಇನ್ನು ಕೆಲವರು ವಂಚನೆಯನ್ನು ತಿಳಿದುಕೊಂಡೇ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ವಂಚನಾ ಜಾಲದವರಿಗಾಗಿ ನೀಡುತ್ತಿದ್ದಾರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಶಿಕ್ಷಣ ಮತ್ತಿತರ ಅಗತ್ಯಕ್ಕಾಗಿ ಹಲವು ವಿದ್ಯಾರ್ಥಿಗಳ ಹೆಸರಲ್ಲಿ ಹೆತ್ತವರು ಜೋಯಿಂಟ್ ಬ್ಯಾಂಕ್ ಖಾತೆ ತೆರೆಯುತ್ತಾರೆ. ಆ ವಿದ್ಯಾರ್ಥಿಗಳಿಗೆ ೧೮ ವರ್ಷ ಪೂರ್ಣಗೊಂಡಾಗ ಅಂತಹ ಖಾತೆಗಳ ಪೂರ್ಣ ಅಧಿಕಾರ ಆ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ. ಹೀಗೆ ಬ್ಯಾಂಕ್ ಖಾತೆ ವ್ಯವಹಾರಗಳು ಪೂರ್ಣವಾಗಿ ವಿದ್ಯಾರ್ಥಿಗಳ ಹೆಸರಿಗೆ ಬಂದಾಗ ಅಂತಹ ವಿದ್ಯಾರ್ಥಿ ಗಳನ್ನು ಕೇಂದ್ರೀಕರಿಸಿ ಸೈಬರ್ ವಂಚನಾ ಜಾಲ ಅವರನ್ನು ಸಂಪರ್ಕಿಸಿ ಆರ್ಥಿಕ ಸಹಾಯದ ಹೆಸರಲ್ಲಿ ಅವರ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ಪಡೆದು ಅವರು ತಮ್ಮ ಸೈಬರ್ ವಂಚನಾ ಕೃತ್ಯಗಳಿಗೆ ಬಳಸುತ್ತಿದ್ದಾರೆ