ಭಜನೆ ಹಾಡುಗಾರ, ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತ ವೆಂಕಟ್ರಮಣ ಆಚಾರ್ಯ ಪೆರ್ಲ ನಿಧನ

ಹೊಸಂಗಡಿ: ಮಂಜೇಶ್ವರ ಬೀಚ್ ರಸ್ತೆ ನಿವಾಸಿ ಖ್ಯಾತ ಭಜನೆ ಹಾಡುಗಾರ ರಾಷ್ಟಿçÃಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಹಾರ್ಮೋನಿಯಂ ವಾದಕ ಪಿ.ಎನ್ ವೆಂಕಟ್ರಮಣ ಆಚಾರ್ಯ ಪೆರ್ಲ (89) ಮೊನ್ನೆ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಇವರು ಆರಿಕ್ಕಾಡಿ ಕೆಳಗಿನ ಮನೆ ತರವಾಡಿನ ಹಿರಿಯರಾಗಿದ್ದರು. ಇವರ ಭಜನೆಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿತ್ತು. ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‌ನಿಂದ ಸನ್ಮಾನಗೊಂಡಿದ್ದರು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಸಂಘದ ಪ್ರಾರಂಭ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಪ್ರಶಾಂತ ಆಚಾರ್ಯ, ಭಾರತಿ, ಮಂಜುಳ, ಸುಮಲತ, ಸೊಸೆ ಗೀತಾ, ಅಳಿಯಂದಿರಾದ ಗಣೇಶ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ, ಸದಾಶಿವ ಆಚಾರ್ಯ, ಸಹೋದರಿಯರಾದ ಉಮಾವತಿ, ಪದ್ಮಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಆರಿಕ್ಕಾಡಿ ಕಾರ್ಲೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ವರ್ಗ ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.

You cannot copy contents of this page