ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ  ಭಾರತಾಂಬೆ ಚಿತ್ರ ಪ್ರದರ್ಶಿಸುವುದಿಲ್ಲ-ರಾಜ್‌ಭವನ್

ತಿರುವನಂತಪುರ:  ರಾಜ್‌ಭವನ ದಲ್ಲಿ ಈ ಹಿಂದೆ ಹಲವು  ಸರಕಾರಿ ಮಟ್ಟದ ಕಾರ್ಯಕ್ರಮದಲ್ಲಿ ಕೈಯಲ್ಲಿ ಕೇಸರಿ ಬಣ್ಣದ ಧ್ವಜ ಹಿಡಿದ ಭಾರತಾಂಬೆಯ ಚಿತ್ರ ಇರಿಸಿ ಅದಕ್ಕೆ ಪುಷ್ಪಾರ್ಚನೆ ನಡೆಸಿರುವುದು ಭಾರೀ ವಿವಾದಗಳಿಗೆ ದಾರಿಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ ೨೮ರಂದು ರಾಜ್ ಭವನದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿ ಸುವ ಕಾರ್ಯಕ್ರಮದಲ್ಲಿ ಭಾರತಾಂ ಬೆಯ ಚಿತ್ರ ಪ್ರದರ್ಶಿಸದಿ ರಲು ರಾಜ್ ಭವನ್ ತೀರ್ಮಾನಿಸಿದೆ.  

ರಾಜ್ ಭವನ ಮತ್ತು ರಾಜ್ಯಪಾಲರಿಗೆ ಸಂಬಂಧಿಸಿದ  ಸುದ್ದಿಗಳು, ನಿಯತಕಾಲಿಕ,ಲೇಖನ ಇತ್ಯಾದಿ ವಿಷಯಗಳನ್ನು ಒಳಗೊಂಡ ರಾಜಹಂಸಿ ಎಂಬ ಪುಸ್ತಕವನ್ನು ಸೆ. ೨೮ಕ್ಕೆ ಬೆಳಿಗ್ಗೆ ೧೦ ಗಂಟೆಗೆ ರಾಜ್‌ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ರ ಸಾನಿಧ್ಯ ದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಾಶನಗೈಯ್ಯಲಿದ್ದಾರೆ. ತಿರುವನಂತಪುರ ಸಂಸದ ಶಶಿ ತರೂರ್ ರಾಜಹಂಸಿ ಪುಸ್ತಕವನ್ನು ಮುಖ್ಯಮಂತ್ರಿಯವರಿಂದ ಈ ಕಾರ್ಯಕ್ರಮದಲ್ಲಿ ಪಡೆದು ಕೊಳ್ಳಲಿದ್ದಾರೆ.

ಸಾಧಾರಣವಾಗಿ ರಾಜ್ ಭವನದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಭಾರತಾಂಬೆಯ ಫೋಟೋ ಇರಿಸಿ ಅದರ ಮುಂದೆ ದೀಪಬೆಳಗಿಸಿ ಪುಷ್ಪಾರ್ಚನೆ ನಡೆಸಿದ ಬಳಿಕವಷ್ಟೇ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಆದರೆ ರಾಜ್‌ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಭಾರತಾಂಬೆಯ ಚಿತ್ರವಿರಿಸುವುದರನ್ನು ಹೊರತುಪಡಿಸ ಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹಿಂದೆ ರಾಜ್ಯಪಾಲರಲ್ಲಿ ಆಗ್ರಹಪಟ್ಟಿದ್ದರು. ಆದರೆ ಅದು ಸಾಧ್ಯವಿಲ್ಲವೆಂಬ ನಿಲುವನ್ನು ರಾಜ್‌ಭವನ ಅಂದು ಸ್ಪಷ್ಟಪಡಿಸಿತ್ತು. ಆದರೆ ಈಗ ಆ ನಿಲುವನ್ನು ಬದಲಾಯಿಸಿರುವ ರಾಜ್ ಭವನ್ ಸರಕಾರಿ ಮಟ್ಟದ ಕಾರ್ಯಕ್ರಮಗಳಲ್ಲಿ  ಇನ್ನು ಭಾರತಾಂಬೆಯ ಚಿತ್ರ ಇರಿಸುವುದನ್ನು ಹೊರತುಪಡಿಸಲಾಗುವುದೆಂದು  ಸ್ಪಷ್ಟಪಡಿಸಿದೆ.

You cannot copy contents of this page