ಕಾಸರಗೋಡು: ಎರ್ನಾಕುಳಂ ಜಿಲ್ಲೆಯ ವಾರಾಪುಳದಿಂದ ಕದ್ದು ಸಾಗಿಸಿದ ಬೈಕ್‌ನ್ನು ಕಾಸರಗೋಡಿನಲ್ಲಿ ಉಪಯೋಗಿಸುತ್ತಿದ್ದ ಮಧೆ ಅದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಅಪಘಾತಕ್ಕೀಡಾದ ಬೈಕ್ ಕದ್ದು ಸಾಗಿಸಿರುವುದಾಗಿ ದೃಢಪಟ್ಟಿದ್ದು, ಅದಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಕಾಸರಗೋಡು ನಿವಾಸಿ ಮುಹ್ಮದ್ ಇಷಾಮ್ ಅಲಿಯಾಸ್ ಪಮೀಹ್ (22), ತೃಶೂರು ಚಾವಕ್ಕಾಡ್ ಮುತ್ತಲಿ ಮಾತ್ರಂಕೋ ಟ್‌ನ ಅಮಲ್ (24) ಮತ್ತು ಚೇರ್ತಲ ತ್ರಿಟಾಟ್ಟುಕುಳಂ ಕೊಲ್ಲಂಪ ರಂಬಿಲ್ ವೀಟಿಲ್‌ನ ಅನ್‌ಸೀಲ್ (23) ಎಂಬಿವರನ್ನು ವಾರಾಪುಳ ಪೊಲೀಸರು ಬಂಧಿಸಿದ್ದಾರೆ.
ವಾರಾಪುಳ ಚೆರಪ್ಪಾಡಂನ ಸೂಫಲಿ ಎಂಬವರ ಮನೆಯ ಕಾರು ಶೆಡ್‌ನಲ್ಲಿರಿಸಲಾಗಿದ್ದ ರೋಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ನ್ನು ಕಳೆದ ಡಿಸೆಂಬರ್ 9ರಂದು ರಾತ್ರಿ ಆರೋಪಿಗಳ ಪೈಕಿ ಅಮಲ್ ಮತ್ತು ಅನ್‌ಸೀಲ್ ಕದ್ದಿದ್ದರೆಂದೂ ಹೀಗೆ ಕದ್ದ ಬೈಕ್‌ನ್ನು ಅವರು ಬಳಿಕ ಇನ್ನೋರ್ವ ಆರೋಪಿ ಕಾಸರಗೋಡಿನ ಇಷಾಮ್‌ಗೆ ಹಸ್ತಾಂತರಿಸಿದ್ದರು. ಈ ಬೈಕನೊಂದಿಗೆ ಇಷಾಮ್ ಕಾಸರಗೋಡಿಗೆ ಬಂದ ವೇಳೆ ಅದು ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದಿತ್ತು.
ಆ ವೇಳೆ ಬೈಕ್ ನಿಲ್ಲಿಸದೆ ಪರಾರಿಯಾಗಿತ್ತು. ಅದರ ನಂಬ್ರಪ್ಲೇಟ್ ಗುರುತಿಸಿ ನಡೆಸಿದ ಮುಂದಿನ ತನಿಖೆಯಲ್ಲಿ ಅದು ವಾರಾಪುಳದಿಂದ ಕದ್ದ ಬೈಕ್ ಆಗಿರುವುದಾಗಿ ದೃಢಪಟ್ಟಿದೆ. ಅದಕ್ಕೆ ಸಂಬಂಧಿಸಿ ನಡೆಸಲಾದ ಮುಂದಿನ ತನಿಖೆಯಲ್ಲಿ ಈ ಮೂವರು ಆರೋಪಿಗಳನ್ನು ಬಂಧಿಸಲಾಯಿ ತೆಂದು ವಾರಾಪುಳ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳು ಮಾದಕದ್ರವ್ಯ, ಕಳವು ಸೇರಿದಂತೆ ಹಲವು ಪ್ರಕರಣಗಳ ಆರೋಪಿಗ ಳಾಗಿದ್ದಾರೆಂದು ವಾರಾಪುಳ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುಧೀಶ್ ಕುಮಾರ್ ತಿಳಿಸಿದ್ದಾರೆ.






