ಬಂದಡ್ಕ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವುಗೈಯ್ಯಲಾ ಗಿದೆ ಎಂದು ದೂರಲಾಗಿದೆ. ಕಯಮುರುಕನ್‌ಕಯದ ಜಿ. ಶಿವಪ್ರಸಾದ್‌ರ ಬೈಕ್ ಕಳವುಗೈ ದಿರುವುದಾಗಿ ದೂರಲಾಗಿದೆ. ಇವರು ನೀಡಿದ ದೂರಿನಂತೆ ಬೇಡಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ವೇಳೆ ಬಂದಡ್ಕ- ಮಾಣಿಮೂಲೆ ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಬೈಕ್ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಶಿವಪ್ರಸಾದ್ ಆಗಲೇ ದೂರು ನೀಡಿದ್ದಾರೆ.
