ಕಾಸರಗೋಡು: ಕೂಡ್ಲು ಜಗನ್ನಾಥ ಶೆಟ್ಟಿ ನಗರ ಸೂರ್ಲು ಹೌಸ್‌ನ ಸುಬ್ರಹ್ಮಣ್ಯ ಮಲ್ಯರ ಪತ್ನಿ ಬಿಂದುರಾಣಿ ಬಿ.ಎಂ. (42) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲಿಪ್ ಟೋಸ್ಪಿರೋಸಿಸ್ ರೋಗದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಭಾರೀ ವೆಚ್ಚ ತಗಲುವ ಚಿಕಿತ್ಸೆಗಾಗಿ ಮೊತ್ತ ಸಂಗ್ರಹಿಸುವುದಕ್ಕೆ ಕುಟುಂಬ ಸದಸ್ಯರು ಯತ್ನ ಮುಂದುವರಿಸುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ. ಕಾಸರಗೋಡು ಹಳೆ ಬಸ್ ನಿಲ್ದಾಣದ ಶ್ರೀಲಕ್ಷ್ಮಿ ಟೈಲರಿಂಗ್ ಶಾಪ್ ನೌಕರೆಯಾಗಿ ದ್ದರು. ಮೃತರು ತಾಯಿ ನಿರ್ಮಲಾ ನಾಯಕ್, ಪುತ್ರ ಶ್ರೀನಿವಾಸ ಮಲ್ಯ, ಸಹೋದರಿ ಸಂಗೀತ ಶೆಣೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕೃಷ್ಣ ನಾಯಕ್ ಈ ಹಿಂದೆ ನಿಧನ ಹೊಂದಿದ್ದಾರೆ.
