ಆಲಪ್ಪುಳ: ಆಲಪ್ಪುಳದಲ್ಲಿ ನಡೆದ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಹಿರಿಯ ನೇತಾರ ಬಿನೋಯ್ ವಿಶ್ವಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಕಾನಂ ರಾಜೇಂದ್ರನ್ ನಿಧನರಾದ ಹಿನ್ನೆಲೆಯಲ್ಲಿ ಅವರು ವಹಿಸಿದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಬಿನೋಯ್ ವಿಶ್ವಂ (69)ರನ್ನು ನೇಮಿಸಲಾಗಿತ್ತು. ಆಲಪ್ಪುಳದಲ್ಲಿ ನಿನ್ನೆ ಸಮಾಪ್ತಿಗೊಂಡ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಅವರು ಮತ್ತೆ ಪಕ್ಷದ ರಾಜ್ಯ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇದರ ಹೊರತಾಗಿ ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯರ ಬಲವನ್ನು 101ರಿಂದ 103ಕ್ಕೇರಿಸಲಾಗಿದೆ. ಇದರಲ್ಲಿ 25 ಹೊಸ ಮುಖಗಳು ಒಳಗೊಂಡಿವೆ. 14 ಮಹಿಳೆಯರು ಇದರಲ್ಲಿ ಸೇರ್ಪಡೆಯಾಗಿದ್ದಾರೆ.