ಕಾಸರಗೋಡು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ನೆರೆಮನೆಯ ಸಾಕುನಾಯಿ ಕಡಿದು ಗಾಯಗೊಳಿಸಿದೆ. ಉದುಮ ಪಡಿಞಾರ್ ಜನ್ಮಕಡಪ್ಪುರದ ಇಬ್ರಾಹಿಂರ ಪುತ್ರಿಯೂ ಜಂಸ್ ಶಾಲೆಯ 1ನೇ ತರಗತಿ ವಿದ್ಯಾರ್ಥಿ ನಿಯಾದ ಶನಾ ಫಾತಿಮಳಿಗೆ ನಾಯಿಯ ಕಡಿತವುಂಟಾಗಿದೆ. ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಂತೆ ಹಿಂದಿನಿಂದ ಬಂದ ನಾಯಿ ಮನೆಗೆ ನುಗ್ಗಿ ಕಡಿದಿರುವುದಾಗಿ ದೂರಲಾಗಿದೆ. ಮನೆಯವರು ಹಾಗೂ ನೆರೆಮನೆಯವರು ನೋಡುತ್ತಿದ್ದಂತೆಯೇ ನಾಯಿ ಬಾಲಕಿ ಮೇಲೆ ದಾಳಿ ನಡೆಸಿದೆ. ತಲೆ ಹಾಗೂ ಕಾಲಿಗೆ ಗಾಯಗೊಂಡ ಬಾಲಕಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನೆರೆಮನೆಯ ಭಾಸ್ಕರನ್‌ರ ನಾಯಿ ಕಡಿದಿರುವುದಾಗಿ ದೂರಲಾಗಿದೆ. ಈ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿಯೂ ತೀವ್ರಗೊಂಡಿದೆ ಎಂದು ನಾಗರಿಕರು ತಿಳಿಸುತ್ತಿದ್ದಾರೆ.






