ಕಾಸರಗೋಡು: ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್‌ನ ಬಿಜೆಪಿಯ ಬೂತ್ ಏಜೆಂಟ್ ಬಿಜೆಪಿ ಕಾರ್ಯಕರ್ತ ಗೋಪಾಲಕೃಷ್ಣನ್‌ರ ಮೇಲೆ ಮತದಾನ ದಿನದಂದು ಸಂಜೆ ಹಲ್ಲೆ ನಡೆಸಿದ ದೂರಿನಂತೆ ಐದು ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಬೇಡಗಂ ಕೇಸು ದಾಖಲಿಸಿಕೊಂಡಿದ್ದಾರೆ.ನೈಮುದ್ದೀನ್ ಪರಪ್ಪ, ಅರ್ಶಾದ್, ರಾಖೇಶ್, ಅಭಿಲಾಷ್, ಗೋಪಿ ಮತ್ತು ಮಧು ಮೊಳೆಯ್ಕಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಸ್ತುತ ವಾರ್ಡ್‌ನ ಬಿಜೆಪಿ ಉಮೇದ್ವಾರ ಪಿ. ಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಮತ ಚಲಾಯಿಸಲೆತ್ನಿಸಿದನ್ನು ತಡೆದ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.







