ಕಾಸರಗೋಡು: ಕಾಸರಗೋಡು ನಗರಸಭೆಯ ೩೫ನೇ ವಾರ್ಡ್‌ನಲ್ಲಿ ಅಭ್ಯರ್ಥಿಗಳ ಪ್ರಚಾರ ಕಾರ್ಯ ತೀವ್ರ ಗೊಂಡಿದೆ. ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಶ್ವಿನಿಯ ವರು ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಮತದಾರರ ಪೂರ್ಣ ಬೆಂಬಲವಿದ್ದು ಇವರು ಗೆಲುವು ಸಾಧಿಸುವುದು ಖಚಿತ ವೆಂದು ಬಿಜೆಪಿ ನೇತಾರರು, ಕಾರ್ಯ ಕರ್ತರು ತಿಳಿಸುತ್ತಿದ್ದಾರೆ. ಈ ವಾರ್ಡ್ ನಲ್ಲಿ ಯುಡಿಎಫ್‌ನಿಂದ ಮುಸ್ಲಿಂ ಲೀಗ್‌ನ ಮೆಹರುನ್ನೀಸ ಹಮೀದ್, ಎಲ್‌ಡಿ ಎಫ್ ನಿಂದ ಐಎನ್‌ಎಲ್‌ನ ನಜೀಬ ನಾಸರ್ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ ನಡೆಯು ತ್ತಿದ್ದರೂ ಬಿಜೆಪಿ ಅಭ್ಯರ್ಥಿಗೆ ಗೆಲುವಿನ ಸಾಧ್ಯತೆ ಹೆಚ್ಚಿದೆಯೆಂದು ಹೇಳಲಾಗುತ್ತಿದೆ.







