ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅಧ್ಯಾಪಕನನ್ನು ಶಾಲೆಯಿಂದ ಹೊರ ಹಾಕಬೇಕು- ಬಿಜೆಪಿಯಿಂದ ಮನವಿ

ಕುಂಬಳೆ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ, ಸಿಪಿಎಂ ನೇತಾರನೂ  ಕಳತ್ತೂರು ಶಾಲೆಯ ಶಿಕ್ಷಕ ಸುಧಾಕರನನ್ನು ಶಾಲೆಯಿಂದ ಹೊರ ಹಾಕಬೇಕೆಂದು ಒತ್ತಾಯಿಸಿ ಬಿಜೆಪಿ ಕುಂಬಳೆ ಉತ್ತರವಲಯ ಸಮಿತಿ ಶಾಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸುಧಾಕರ ಶಾಲೆಯಲ್ಲಿ ಇನ್ನೂ ಮುಂದುವರಿದರೆ ಬಿಜೆಪಿ ಶಾಲೆ ಮುಂದೆ ಧರಣಿ, ಪ್ರತಿಭಟನೆ ನಡೆಸುವುದಾಗಿಯೂ ಮನವಿಯಲ್ಲಿ ತಿಳಿಸಲಾಗಿದೆ. ಬಿಜೆಪಿ ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ, ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್, ದಕ್ಷಿಣವಲಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ನೇತಾರ ವಿಕ್ರಮ್ ಪೈ ಮೊದಲಾದವರು ಉಪಸ್ಥಿತರಿದ್ದರು.

RELATED NEWS

You cannot copy contents of this page