ಕುಂಬಳೆ: ಸಂಚರಿಸುತ್ತಿದ್ದ ವಿಮಾನದಲ್ಲಿ ನಡೆದ ಉಗ್ರ ದಾಳಿಯ ಸಂದರ್ಭದಲ್ಲಿ ಸ್ವಂತ ಜೀವದಾಸೆ ಯನ್ನು ಬಿಟ್ಟು ಪ್ರಯಾಣಿಕರನ್ನು ದುರಂತದಿಂದ ಪಾರುಮಾಡಿದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸ ಮತ್ತು ಧೈರ್ಯವನ್ನು ಗೌರವಿಸುವ ಅಭಿನಂದನಾ ಕಾರ್ಯಕ್ರಮವನ್ನು ಬಿಜೆಪಿ ಕುಂಬಳೆ ಮಂಡಲ ವತಿಯಿಂದ ನಿನ್ನೆ ಆಯೋಜಿಸಲಾಯಿತು. ಕಾರ್ಯ ಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ಅವರು ಮಾತನಾಡಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ರ ಧೈರ್ಯ ಹಾಗೂ ಸಾಹಸದ ಬಗ್ಗೆ ಗುಣಗಾನ ಮಾಡಿದರು. ಸ್ಮಿತ್ ಮಚ್ಚಾರ್ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸ ಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಂ ಪೈ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕೆ.ಪಿ. ವಲ್ಸರಾಜ್, ಪಂಚಾಯತ್ ಸಮಿತಿ ಅಧ್ಯಕ್ಷರಾದ ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ, ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ, ಪಂಚಾಯತ್ ಸದಸ್ಯರಾದ ರಮೇಶ್ ಭಟ್, ಅಜಿತ್ ಕುಂಬಳೆ, ಕಾಂಚಾರ, ಮಂಡಲ ಉಪಾಧ್ಯಕ್ಷರಾದ ಸುಧಾಕರ ಕಾಮತ್, ಪ್ರೇಮಾವತಿ, ಕೋಶಾಧಿಕಾರಿ ರಾಧಾಕೃಷ್ಣ ರೈ, ಸದಸ್ಯೆ ವಿದ್ಯಾ ಪೈ, ಜಿಲ್ಲಾ ಸಮಿತಿ ಸದಸ್ಯ ಬಾಬು ಕುಬಣೂರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಪುಣಿಯೂರು ಸ್ವಾಗತಿಸಿ, ದಿನೇಶ್ ಮುಳಿಂಜ ವಂದಿಸಿದರು.







