ಮುಳ್ಳೇರಿಯದಲ್ಲಿ ವಂದೇ ಮಾತರಂ ಗೀತೆಗೆ ಅವಮಾನಗೈದವರ ವಿರುದ್ಧ ಬಿಜೆಪಿಯಿಂದ ದೊಂದಿ ಮೆರವಣಿಗೆ ಪ್ರತಿಭಟನೆ

ಮುಳ್ಳೇರಿಯ:  ಕುಟುಂಬ ಆರೋಗ್ಯ ಕೇಂದ್ರದ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮದ ಮಧ್ಯೆ ವಂದೇ ಮಾತರಂ ಸಂಪೂರ್ಣವಾಗಿ ಹಾಡಿ ಮುಗಿಸುವುದಕ್ಕಿಂತ ಮುಂಚಿತವಾಗಿ ವೇದಿಕೆಯಲ್ಲಿ ಕುಳಿತುಕೊಂಡು ಆಲಾಪನೆಗೆ ಅಡ್ಡಿಪಡಿಸಲು ಯತ್ನಿಸಿದ ಆರೋಗ್ಯ ಸಚಿವ ಹಾಗೂ ಇತರ ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಯ ಕ್ರಮವನ್ನು ಪ್ರತಿಭಟಿಸಿ ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ ಮುಳ್ಳೇರಿಯ ಪೇಟೆಯಲ್ಲಿ ದೊಂದಿ ಮೆರವಣಿಗೆ ನಡೆಸಲಾಯಿತು. ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ವಿ.ಕೆ. ಸಜೀವನ್ ಮೆರವಣಿಗೆ ಉದ್ಘಾಟಿಸಿದರು. ೨೦೨೬ ಆಗಸ್ಟ್‌ನಲ್ಲಿ ನಡೆಸಿದ ತಿದ್ದುಪಡಿಯಲ್ಲಿ ವಂದೇ ಮಾತರಂಕ್ಕೆ ರಾಷ್ಟ್ರ ಗೀತೆಗೆ  ಸಮಾನವಾದ ಪರಿಗಣನೆ ಹಾಗೂ ಗೌರವ ನೀಡಬೇಕಾಗಿದೆ. ರಾಜಕೀಯ ಆಸಕ್ತಿಗಳ ಹೆಸರಲ್ಲಿ ದೇಶಿಯ ಗೀತೆಯನ್ನು ಅಪಮಾನಿಸಿದ ಜನಪ್ರತಿನಿಧಿಗಳ ಕ್ರಮ ಅಂಗೀಕರಿಸಲು ಸಾಧ್ಯವಿಲ್ಲವೆಂದು, ಘಟನೆಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿ.ಕೆ. ಸಜೀವನ್ ಆಗ್ರಹಿಸಿದರು.

ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷೆ, ಕಾರಡ್ಕ ಪಂ. ಅಧ್ಯಕ್ಷೆ ಎಂ. ಜನನಿ, ರಾಜ್ಯ ಕೌನ್ಸಿಲ್ ಸದಸ್ಯರಾದ ಶಿವಕೃಷ್ಣ ಭಟ್, ಹರೀಶ್ ನಾರಂಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಂ. ಶ್ರೀಧರ ಬೆಳ್ಳೂರು, ರವೀಂದ್ರ ಗೋಸಾಡ, ಪೆನ್ಸನರ್ಸ್ ಜಿಲ್ಲಾ ಸಂಚಾಲಕ ಚಂದು ಮಾಸ್ತರ್ ಮಾತನಾಡಿದರು. ಸುಧಾಮ ಗೋಸಾಡ ಸಹಿತ ಹಲವರು ಮುಖಂಡರು ಭಾಗವಹಿಸಿದರು.

RELATED NEWS

You cannot copy contents of this page