ಬಿಜೆಪಿ ಗೃಹ ಸಂಪರ್ಕಕ್ಕೆ ಎಂ.ಟಿ. ರಮೇಶ್‌ರಿಂದ ಚಾಲನೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ ಪ್ರಚಾರಾರ್ಥ ಬಿಜೆಪಿ ಆಯೋಜಿಸುವ ಗೃಹ ಸಂಪರ್ಕದ ಜಿಲ್ಲಾ ಮಟ್ಟದ ಉದ್ಘಾಟನೆ ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಹತ್ತನೇ ವಾರ್ಡ್ ಕೇಳುಗುಡ್ಡೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನಿರ್ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್ತ್, ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಜಿಲ್ಲಾ ಕಾರ್ಯದರ್ಶಿಗಳಾದ ಎನ್. ಮಧು, ಪುಷ್ಪಾಗೋಪಾಲನ್, ಪ್ರಮೀಳಾ ಮಜಲ್, ಜಿಲ್ಲಾ ಸೆಲ್ ಕೋ-ಆರ್ಡಿ ನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಕಾಸರಗೋಡು ಮಂಡಲ ಕಾರ್ಯ ದರ್ಶಿಗಳಾದ ಪ್ರಿಯಾ ನಾಯ್ಕ್, ರಮೇಶ್ ಮೀಪುಗುರಿ, ಮೊಗ್ರಾಲ್ ಪುತ್ತೂರು ಪಂ. ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಪೆರ್ನಡ್ಕ, ಅಲ್ಪ ಸಂಖ್ಯಾತ ಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಎಂ. ಸುಹೈಲ್, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮುರಳೀ ಕುಮಾರ್, ವಾರ್ಡ್ ಇನ್‌ಚಾರ್ಜ್ ರಾಜೇಶ್ ನಾಯ್ಕ್ ಭಾಗವಹಿಸಿದರು.

You cannot copy contents of this page