ಬಿಜೆಪಿ ಕುಂಬಳೆ ಮಂಡಲ ಸೇವಾ ಸಂಕಲ್ಪ ಅಭಿಯಾನ: ಗೌರವಾರ್ಪಣೆ   

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸೇವಾ ಸಂಕಲ್ಪ ಅಭಿಯಾನ ದಂಗವಾಗಿ ಮಂಡಲದ ಸುಮಾರು ನೂರೈವತ್ತು ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾ ಯಿತು. ಸಮಾಜದಲ್ಲಿ ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವವಾಗಿದೆ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು. ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಸುರಕ್ಷತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಸೇವೆಯ ೨೫ನೇ ವರ್ಷದ ಅಂಗವಾಗಿ ಬಿಜೆಪಿ ಕುಂಬಳೆ ಮಂಡಲ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಬಿ. ವಿಕ್ರಮ್ ಪೈ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಕೆ. ಸತೀಶ್ ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ಜಯಂತ ಪಾಟಾಳಿ, ಜಿಲ್ಲಾ ಉಪಾಧ್ಯಕ್ಷ ರಾದ ಮುರಳೀಧರ ಯಾದವ್ , ಪಿ. ರಮೇಶ್ ಕಾಸರಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ವಿಭಾಗದ ಉಪಾಧ್ಯಕ್ಷ ವಿಜಯಕುಮಾರ್ ರೈ, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವತ್ಸರಾಜ್ ಹಾಗೂ ಸೆಲ್ ಸಂಚಾಲಕ ಸುಕುಮಾರ್ ಕುದ್ರೆಪ್ಪಾಡಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಬಾಬು ಕುಬಣೂರು, ಜಯಂತಿ ಟಿ. ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಕುಂಬಳೆ, ರಮೇಶ್ ಭಟ್ ಕುಂಬಳೆ, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ದಿನೇಶ್ ಚೆರುಗೋಳಿ, ಮಂಡಲ ಉಪಾಧ್ಯಕ್ಷರಾದ ಬಾಲಕೃಷ್ಣ ಅಂಬಾರ್, ರಾಧಾಕೃಷ್ಣ ರೈ ಮಡ್ವ, ವಿನೋದನ್ ಕಡಪ್ಪುರ, ಕುಂಬಳೆ ದಕ್ಷಿಣ ಮತ್ತು ಉತ್ತರ ಘಟಕಗಳ ಅಧ್ಯಕ್ಷರಾದ ಸುಜಿತ್ ರೈ ಹಾಗೂ ಶಿವಪ್ರಸಾದ್ ರೈ, ಪುತ್ತಿಗೆ ಪಂಚಾಯತ್ ಬಿಜೆಪಿ ಅಧ್ಯಕ್ಷ ಪುರುಷೋತ್ತಮ, ಮಹಿಳಾ ಮೋರ್ಚಾ ನಾಯಕಿ ಶಾರದಾ ಕುಂಬಳೆ, ಪಕ್ಷದ ಪಂಚಾಯತ್ ಜನಪ್ರತಿನಿಧಿಗಳು ನೇತೃತ್ವ ವಹಿಸಿದ್ದರು. ಪುಷ್ಪಲತಾ ಕುಂಬಳೆ ಸಂಪೂರ್ಣ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಪುಣಿಯೂರು, ದಿನೇಶ್ ಮುಳಿಂಜ ನಿರೂಪಿಸಿದರು. ಸೇವಾ ಸಂಕಲ್ಪ ಅಭಿಯಾನದ ಅಂಗನವಾಡಿ ಉತ್ಸವದ ಸಂಚಾಲಕ, ಬಿಜೆಪಿ ಮಂಡಲ ಕಾರ್ಯದರ್ಶಿ ಸಾಕ್ಷಿ ಶೆಟ್ಟಿ ಸ್ವಾಗತಿಸಿದರು. ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಸುಧಾ ಗಣೇಶ್ ವಂದಿಸಿದರು.

You cannot copy contents of this page