ಬಿಜೆಪಿ ನೇತಾರ, ನಗರಸಭಾ ಮಾಜಿ ಕೌನ್ಸಿಲರ್ ಕೆ. ಗಣೇಶ್ ಭಂಡಾರಿ ನಿಧನ

ಕಾಸರಗೋಡು: ಬಿಜೆಪಿ ಮುಖಂಡ ಹಾಗೂ ಕಾಸರಗೋಡು ನಗರಸಭೆಯ  ಮಾಜಿ ಕೌನ್ಸಿಲರ್ ಮೀಪುಗುರಿ ಪಾರೆಕಟ್ಟೆ ರಸ್ತೆಯ ಕೆ. ಗಣೇಶ್ ಭಂಡಾರಿ (68) ನಿಧನ ಹೊಂದಿದರು. ಕಾಸರಗೋಡು ನUರದ ಬ್ಯಾಂಕ್ ರಸ್ತೆಯಲ್ಲಿ ವ್ಯಾಪಾರಿಯಾಗಿದ್ದ ಇವರು ಕಾರವಲ್ ಏಜೆಂಟ್ ಕೂಡಾ ಆಗಿದ್ದರು.

  ನಗರಸಭೆಯ ಬೀರಂತಬೈಲು ವಾರ್ಡ್‌ನ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದ ಇವರು ವಾರ್ಡ್‌ನ ಅಭಿವೃದ್ಧಿಗಾಗಿ ಮಹತ್ವದ ಪಾತ್ರ ವಹಿಸಿದ್ದರು. ಅದೇ ರೀತಿ  ಪಕ್ಷದ  ಹಿತಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.

ಕೊಗ್ಗು ಭಂಡಾರಿ- ಚೋಮು ದಂಪತಿ ಪುತ್ರನಾದ ಮೃತರು ಪತ್ನಿ ಕೆ. ಸುಲೋಚನ, ಮಕ್ಕಳಾದ ಕೆ. ಶರತ್, ಕೆ. ಶರಣ್ಯ (ಜನಾರ್ದನ ಆಸ್ಪತ್ರೆ ಕಾಸರಗೋಡು), ಅಳಿಯ ಕೆ. ರಾಗೇಶ್, ಸಹೋದರರಾದ  ಬಾಬು ಭಂಡಾರಿ, ನಾರಾಯಣ ಭಂಡಾರಿ, ಪಿ. ಕೃಷ್ಣ ಭಂಡಾರಿ, ಪಿ. ಅಚ್ಯುತ ಭಂಡಾರಿ,  ಪಿ. ರಾಮ ಭಂಡಾರಿ, ಸಹೋದರಿಯರಾದ ಕಮಲ, ಯಮುನ, ಬೇಬಿ, ಶಾರದಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಬಿಜೆಪಿ ನೇತಾರರು, ಕಾರ್ಯಕರ್ತರು ಸಹಿತ ಹಲವಾರು ಮಂದಿ  ತಲುಪಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಇಂದು ಮಧ್ಯಾಹ್ನ ಪಾರೆಕಟ್ಟೆ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

You cannot copy contents of this page