ಹೊಸದುರ್ಗ: ಬಿಜೆಪಿ ಮುಖಂಡ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಅರವಂಜಾಲ್ ಪನೆಯಂದಟ್ಟ ತಂಬಾನ್ (57) ಮೃತಪಟ್ಟವರು. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯನಾಗಿದ್ದಾರೆ. ಇಂದು ಬೆಳಿಗ್ಗೆ ಪಯ್ಯನ್ನೂರು ಮೇಲ್ಪಾಲದ ಸಮೀಪ ರೈಲ್ವೇ ಟ್ರಾಕ್ನಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ತಲುಪಿ ಮೃತದೇಹವನ್ನು ಶವಾಗಾರಕ್ಕೆ ಕೊಂಡೊಯ್ದಿದ್ದಾರೆ. ಮೃತರು ಪತ್ನಿ ಶ್ಯಾಮಲ, ಮಕ್ಕಳಾದ ಶ್ವೇತ, ಕೃಷ್ಣ, ಮದುಲ್ಲಾಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







