ಬಿಜೆಪಿ ಮಂಗಲ್ಪಾಡಿ 7ನೇ ವಾರ್ಡ್ ಕಾರ್ಯಕರ್ತರ ಸಮಾವೇಶ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್‌ನ 7 ವಾರ್ಡ್ ಕಾರ್ಯಕರ್ತರ ಸಮಾವೇಶ ಪ್ರತಾಪ ನಗರ ಶ್ರೀ ಗೌರಿ ಗಣೇಶ ಭಜನಾ ಮಂದಿರದಲ್ಲಿ ನಿನ್ನೆ ಸಂಜೆ ನಡೆಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್ ಸುನಿಲ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲು ಕೇಂದ್ರ ಸರಕಾರದ ಸೌಲಭ್ಯಗಳ ಬಗ್ಗೆ ವಿವರಿಸಿದರು, ವಾರ್ಡ್ ಕನ್ವೀನರ್ ಪ್ರವೀಣ್ ಪಿ ಅಧ್ಯಕ್ಷತೆ ವಹಿಸಿದರು, ಪಂ. ಸದಸ್ಯೆ ಸುಧಾ ಗಣೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ , ಓ.ಬಿ.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ ವಲ್ಸರಾಜ್ ಉಪಸ್ಥಿತರಿದ್ದರು. ಸುಧಾ ಗಣೇಶ್‌ರನ್ನು ಕಾರ್ಯಕರ್ತರು ಅಭಿನಂದಿಸಿದರು. ಯುವಮೋರ್ಚಾ ಪಂಚಾಯತ್ ಅಧ್ಯಕ್ಷ ಶ್ರೀಜಿತ್ ಪ್ರತಾಪನಗರ ಸ್ವಾಗತಿಸಿ, ವಂದಿಸಿದರು.

You cannot copy contents of this page