ಪುತ್ತಿಗೆ: ಪ್ರಪಂಚದ ರಾಜಕೀಯ ಪಕ್ಷಗಳಲ್ಲಿ ಮೊದಲೇ ಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ನರೇಂದ್ರಮೋದಿ ನೇತೃತ್ವದಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಿರುವ ಈ ಸುವರ್ಣ ಕಾಲಘಟ್ಟದಲ್ಲಿ ಪುತ್ತಿಗೆ ಪಂಚಾಯತ್ನಲ್ಲೂ ಬಿಜೆಪಿ ಮೊದಲ ಸ್ಥಾನಕ್ಕೇರಬೇಕಾಗಿ ದೆಯೆಂದು ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯ ರೈ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿ ಪುತ್ತಿಗೆ ಪಂಚಾಯತ್ ಸಮಿತಿ ವತಿಯಿಂದ ಎಡನಾಡು-ಕಣ್ಣೂರು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚುನಾವಣಾ ಕಾರ್ಯಾಗಾರ ಹಾಗೂ ಮಾಹಿತಿ ಶಿಬಿರದಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ ಪ್ರಮುಖರನ್ನು ಹಾಗೂ ಕಾರ್ಯ ಕರ್ತರನ್ನು ಉದ್ದೇಶಿಸಿ ಅವರು ಮಾತನಾಡು ತ್ತಿದ್ದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲೋತ್ತ್ ತ್ರಿಸ್ತರ ಪಂಚಾಯತ್ ಚುನಾವಣೆಗೆ ಸಿದ್ಧತೆ ಬಗ್ಗೆ ಕಾರ್ಯ ಕರ್ತರಿಗೆ ಮಾಹಿತಿ ನೀಡಿದರು. ಪಂಚಾ ಯತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ದೇರಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ವಾರ್ಡ್ ಸಮ್ಮೇಳನಗಳ ಪ್ರಾಮುಖ್ಯತೆ ಕುರಿತು ತಿಳಿಸಿದರು. ಪಂಚಾಯತ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಕಣ್ಣೂರು ಸ್ವಾಗತಿಸಿ, ವಿಶ್ವನಾಥ ಜಿ ವಂದಿಸಿದರು. ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ, ಅನಿಲ್ ಮಣಿಯಂಪಾರೆ, ಪಕ್ಷದ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದರು.
