ಜನರ ಜೀವ ಸಂರಕ್ಷಿಸಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯೆಯರಿಂದ ಮೊಗ್ರಾಲ್ ಪುತ್ತೂರು ಪಂ. ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

ಕಾಸರಗೋಡು: ಜನರ ಜೀವ ಸಂರಕ್ಷಿಸಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು  ಮೊಗ್ರಾಲ್ ಪುತ್ತೂರು ಪಂಚಾಯತ್  ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಾಯತ್‌ನ ಬಿಜೆಪಿ ಸದಸ್ಯೆಯರಾದ ಶ್ರೀವಿದ್ಯಾ, ವಸಂತಿ, ಮಲ್ಲಿಕ, ಪ್ರಮೀಳ ಎಂಬಿವರು  ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚು ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿವಿಧೆಡೆ ಅಲೆದಾಡುತ್ತಿರುವ ಜಾನುವಾರುಗಳನ್ನು ಪಂಚಾಯತ್‌ನ ದೊಡ್ಡಿಯಲ್ಲಿ  ಕಟ್ಟಿಹಾಕಬೇಕು, ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚು ನಾಯಿಗಳು ಹಾಗೂ ಜಾನುವಾರುಗಳ ಉಪಟಳ ಕುರಿತು ಧ್ವನಿವರ್ಧಕ ಮೂಲಕ ಜನರಿಗೆ ತಿಳಿಸಿ ಜಾಗ್ರತೆ ಮೂಡಿಸಬೇಕು, ಪಂಚಾಯತ್ ಆಡಳಿತ ಸಮಿತಿ  ಕೈಗೊಳ್ಳುವ ನಿರ್ಧಾರಗಳನ್ನು ಗುಪ್ತವಾಗಿಡುವ ಪಂಚಾಯತ್ ಕಾರ್ಯದರ್ಶಿಯನ್ನು ನಿಯಂತ್ರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸತ್ಯಾಗ್ರಹ ನಡೆಸಲಾಗುತ್ತಿದೆ.  ಜನರು ಜಾಗ್ರತೆ ಪಾಲಿಸುವಂತೆ ಧ್ವನಿವರ್ಧಕ ಮೂಲಕ ಘೋಷಣೆ ಆರಂಭಿಸುವ ವರೆಗೆ ಸತ್ಯಾಗ್ರಹ ಮುಂದುವರಿಸು ವುದಾಗಿ ಚಳವಳಿ ನಿರತರು ತಿಳಿಸಿದ್ದಾರೆ.  ಪಂಚಾಯತ್ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚುನಾಯಿಗಳ ಕಡಿತಕ್ಕೊಳಗಾಗಿ ೪೦ಕ್ಕೂ ಹೆಚ್ಚು ಮಂದಿ  ಗಾಯಗೊಂ ಡಿದ್ದಾರೆ ಎಂದು ಸತ್ಯಾಗ್ರಹ ನಿರತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಸುರಕ್ಷತೆಯನ್ನು ಖಚಿತಪಡಿ ಸಲು ಪಂಚಾಯತ್‌ನ ಭಾಗದಿಂದ ತುರ್ತು ಕ್ರಮ ಕೈಗೊಂಡು ಶೀಘ್ರ ತಿಳುವಳಿಕೆ ಕಾರ್ಯಕ್ರಮ ನಡೆಸುವಂತೆ ಚಳವಳಿ ನಿರತರು ಒತ್ತಾಯಿಸಿದ್ದಾರೆ.

You cannot copy contents of this page