ವಿಕಸಿತ ಕುಂಬ್ಡಾಜೆ ಸಂಕಲ್ಪದೊಂದಿಗೆ ಬಿಜೆಪಿ ಕಾರ್ಯಕರ್ತರ ಸಮಾವೇಶ ನಾಳೆ

ಬದಿಯಡ್ಕ: ಭಾರತೀಯ ಜನತಾ ಪಾರ್ಟಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ವಿಕಸಿತ ಭಾರತದೊಂದಿಗೆ ವಿಕಸಿತ ಕುಂಬ್ಡಾಜೆ ಎಂಬ ಸಂಕಲ್ಪವನ್ನಿಟ್ಟುಕೊAಡು ಮುಂಬರುವ ತ್ರಿಸ್ತರ ಪಂಚಾಯತ್ ಚುನಾವಣೆಯ ಮುನ್ನುಡಿಯಾಗಿ ಕಾರ್ಯಕರ್ತರ ಸಮಾವೇಶ ಹಾಗೂ ಜನಪ್ರತಿನಿದಿsಗಳಿಗೆ ಅಭಿನಂದನಾ ಕಾರ್ಯಕ್ರಮ ನಾಳೆ ಬೆಳಗ್ಗೆ ಅಗಲ್ಪಾಡಿ ಜಯನಗರ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸುವರು.

ನಿಕಟಪೂರ್ವ ಕೇರಳ ರಾಜ್ಯಾಧ್ಯಕ್ಷ ಸಿ.ಕೆ. ಪದ್ಮನಾಭನ್, ಬಿಜೆಪಿ ಮಂಗಳೂರು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್., ದೇಶೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬದಿಯಡ್ಕ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್., ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ರಾಜ್ಯಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಎಸ್.ಸಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ರಘು ಮಾಚಾವು ಹಾಗೂ ಪ್ರಮುಖರು ಪಾಲ್ಗೊಳ್ಳÄವರು.

RELATED NEWS

You cannot copy contents of this page