ಕೇರಳದ ಎರಡು ತುದಿಗಳಲ್ಲೂ ಬಿಜೆಪಿಯ ಸಾಧನೆ-ವಿ.ಕೆ. ಸಜೀವನ್

ಮಧೂರು:  ರಾಜ್ಯದ ಉತ್ತರ ಭಾಗದಲ್ಲಿ ಬಿಜೆಪಿ ಆಡಳಿತ ಸತತವಾಗಿ  ೪೬ನೇ ವರ್ಷಕ್ಕೆ  ಕಾಲಿಡುತ್ತಿರುವಾಗ ರಾಜ್ಯದ  ತೆಂಕಣ ಜಿಲ್ಲೆ ರಾಜಧಾನಿ ಯಾದ ತಿರುವನಂತಪುರ ಕಾರ್ಪೋ ರೇಶನ್‌ನ್ನು ಸ್ವಾಧೀನಪಡಿಸಿದ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆಯೆಂದು ಪಕ್ಷದ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಸತತವಾಗಿ  ೪೬ನೇ ವರ್ಷಕ್ಕೆ ಆಡಳಿತ ನಡೆಸಲು ಅವಕಾಶ ಲಭಿಸಿದ ಮಧೂರು ಪಂಚಾಯತ್ ಬಿಜೆಪಿ ಸಮಿತಿಗಳ ಜಂಟಿ ಆಶ್ರಯದಲ್ಲಿ ಹರ್ಷಾಚರಣೆ ಹಾಗೂ ಸಾರ್ವಜನಿಕ ಸಭೆಯನ್ನು  ಮಧೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

ಕೋಮು ಭೀತಿವಾದಿ ಸಂಘಟನೆಗಳ ಜೊತೆ ಸೇರಿಸಿಕೊಂಡು ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಾಧನೆ ಮಾಡಲಿರುವ ಯುಡಿಎಫ್‌ನ ಯತ್ನ ಮಧೂರಿನಲ್ಲಿ ಪರಾಭವಗೊಂಡಿದೆ ಎಂದು ಅವರು ನುಡಿದರು. ಬಿಜೆಪಿ ಮಧೂರು ಪಂ.ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ರವಿ ಗಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷೆ  ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಕೆ. ಗೋಪಾಲಕೃಷ್ಣ, ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ರವಿ ಗಟ್ಟಿ, ಪ್ರಧಾನ ಕಾರ್ಯದರ್ಶಿ ಧನಂಜಯನ್ ಮಧೂರು, ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಮಾಧವ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೀಪುಗುರಿ ಮಾತನಾಡಿದರು.

 ಸೂರ್ಲು ಶ್ರೀ ಗಣೇಶ ಭಜನಾ ಮಂದಿರದಿಂದ ಆರಂಭಗೊಂಡ ವಿಜಯೋತ್ಸವ ಮೆರವಣಿಗೆಯಲ್ಲಿ ಹಲವಾರು ಮಂದಿ ಭಾಗವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ನೇತೃತ್ವ ವಹಿಸಿದ್ದು ಮಧೂರು ಕ್ಷೇತ್ರದ ಬಳಿಯಲ್ಲಿ ಸಮಾಪ್ತಿಗೊಂಡಿತು.

RELATED NEWS

You cannot copy contents of this page