ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡ ಕಾಳಧನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಹೈವೇ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಮಂಗಳೂರು ಭಾಗದಿಂದ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ 72,24,500 ರೂಪಾಯಿಗಳನ್ನು ಪತ್ತೆಯಾಗಿತ್ತು.
ಕಾರಿನಲ್ಲಿ ಕಾಞಂಗಾಡ್ ನಿವಾಸಿಗಳಾದ ತುಕಾರಾಮ್, ಪತ್ನಿ ಸುನಿತ ಹಾಗೂ ಸಹಾಯಕ ಅಕ್ಷಯ್ ಎಂಬಿವರಿದ್ದರು. ಹಣದ ಮೂಲವೇನೆಂದು ಪ್ರಶ್ನಿಸಿದಾಗ ಕಾರಿನಲ್ಲಿದ್ದವರು ಯಾವುದೇ ಮಾಹಿತಿಯನ್ನೂ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕಾರು ಹಾಗೂ ಹಣವನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು.







