ಬಿಎಲ್‌ಒಗೆ ಹಲ್ಲೆಗೈಯ್ಯಲೆತ್ನ : ಸಿಪಿಎಂ ಲೋಕಲ್ ಸೆಕ್ರೆಟರಿ ಬಂಧನ

ಮುಳ್ಳೇರಿಯ: ಎಸ್‌ಐಆರ್ ಫಾರ್ಮ್ ನೀಡಿಲ್ಲವೆಂದು ಆರೋಪಿಸಿ ಬೂತ್ ಲೆವೆಲ್ ಆಫೀಸರ್‌ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯಲು ಯತ್ನಿಸಿದ  ಸಿಪಿಎಂ ಲೋಕಲ್ ಸೆಕ್ರೆಟರಿಯನ್ನು ಬಂಧಿಸಲಾಗಿದೆ. ದೇಲಂಪಾಡಿ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷನೂ ಪಾಂಡಿ ಲೋಕಲ್ ಸೆಕ್ರೆಟರಿಯಾದ  ಚಾಪೆಕ್ಕಲ್‌ನ ಎ. ಸುರೇಂದ್ರನ್ (53)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪಯರಡ್ಕ ವಾರ್ಡ್‌ನ  ಬಿಎಲ್‌ಒ ಪಿ. ಅಜಿತ್ ನೀಡಿದ ದೂರಿನಂತೆ    ಸುರೇಂದ್ರನ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಚಾಪೆಕ್ಕಲ್ ಕಮ್ಯುನಿಟಿ ಹಾಲ್‌ನಲ್ಲಿ  ಅಜಿತ್‌ಗೆ ಹಲ್ಲೆಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ. ಎಸ್‌ಐಆರ್ ಫಾರ್ಮ್ ಸಂಗ್ರಹಿಸಲೆಂದು  ಬಿಎಲ್‌ಒ ಅಲ್ಲಿಗೆ ತಲುಪಿದ್ದರು. ವಾರ್ಡ್‌ನ ಪುಷ್ಪ ಎಂಬವರಿಗೆ ಎಸ್‌ಐಆರ್ ಫಾರ್ಮ್ ನೀಡದಿರು ವುದರ ಬಗ್ಗೆ  ಅವರಿಬ್ಬರ ಮಧ್ಯೆ  ಈ ಮೊದಲು ತರ್ಕವುಂಟಾಗಿತ್ತು. ಅಜಿತ್  ಫಾರ್ಮ್ ನೀಡಿದ ವ್ಯಕ್ತಿ ಪುಷ್ಪರಿಗೆ ಅದನ್ನು ತಲುಪಿಸಿರಲಿಲ್ಲ. ಇದರಿಂದ ನಿನ್ನೆ ಬೆಳಿಗ್ಗೆ ಪುಷ್ಪರ ಮನೆಗೆ ಅಜಿತ್ ಫಾರ್ಮ್ ತಲುಪಿಸಿದ್ದರು. ಅದರ ಬೆನ್ನಲ್ಲೇ ಪಂಚಾಯತ್ ಸದಸ್ಯ ಬಿಎಲ್‌ಒಗೆ ಹಲ್ಲೆಗೈಯ್ಯಲೆತ್ನಿಸಿ ರುವುದಾಗಿ ದೂರಲಾಗಿದೆ. ಘಟನೆಯ ವೀಡಿಯೋ  ಹರಡುವುದರೊಂದಿಗೆ ಜಿಲ್ಲಾಧಿಕಾರಿ ಈ ವಿಷಯದಲ್ಲಿ  ಮಧ್ಯಪ್ರವೇಶಿಸಿದ್ದಾರೆ. ದೂರುದಾ ತನಾದ ಅಜಿತ್ ಬಂದಡ್ಕ ಬಿವರೇಜ್ ಕಾರ್ಪೋರೇಶನ್‌ನಲ್ಲಿ ಎಲ್‌ಡಿ ಕ್ಲರ್ಕ್ ಆಗಿದ್ದಾರೆ.

You cannot copy contents of this page