ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವು ದುರ್ಗಿಪಳ್ಳ ಪರಿಸರದಲ್ಲಿ ಇತ್ತೀಚೆಗೆ ಕಂಡುಬಂದ ರಕ್ತ ಮನುಷ್ಯರದ್ದಲ್ಲವೆಂದು ತಿಳಿದುಬಂದಿದೆ. ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಇದು ಪ್ರಾಣಿಯದ್ದಾಗಿದೆಯೆಂದು ತಿಳಿಸಲಾಗಿದೆ. ದುರ್ಗಿಪಳ್ಳ ಪರಿಸರದ ಎರಡು ಅಂಗಡಿಗಳ ಮುಂದೆ ಇತ್ತೀಚೆಗೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
