ಬಿಎಂಎಸ್ ಜಿಲ್ಲಾ ಸಮ್ಮೇಳನಕ್ಕೆ ಬೃಹತ್ ರ‍್ಯಾಲಿಯೊಂದಿಗೆ ಚಾಲನೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್)ನ ಜಿಲ್ಲಾ ಸಮ್ಮೇಳನದ ಅಂಗವಾಗಿ ಕಾರ್ಮಿಕರ ಬೃಹತ್ ರ‍್ಯಾಲಿ ಇಂದು ಬೆಳಿಗ್ಗೆ ಕಾಸರ ಗೋಡು ನಗರದಲ್ಲ್ಲಿ ನಡೆಯಿತು. ನುಳ್ಳಿಪ್ಪಾಡಿಯಿಂದ ಆರಂಭಗೊಂಡ ಮೆರವಣಿಗೆಯಲ್ಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ತಲುಪಿದ ಸಾವಿರಾರು ಮಂದಿ ಕಾರ್ಮಿಕರು ಭಾಗವಹಿಸಿದರು. ರ‍್ಯಾಲಿಯ ಸಮಾರೋಪ ಸಮಾರಂಭ ಕರಂದಕ್ಕಾಡ್‌ನ ಅಡ್ವ. ಪಿ.ಸುಹಾಸ್ ನಗರದಲ್ಲಿ ನಡೆಯಲಿದೆ.

ಬಿಎಂಎಸ್  ರಾಜ್ಯ ಕಾರ್ಯದರ್ಶಿ ಮಧು ಕುಮಾರ್ ಉದ್ಘಾಟಿಸಿ ಮಾತನಾಡುವರ. ನಾಳೆ ಬೆಳಿಗ್ಗೆ 9.30ರಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿಯ ಆರ್.ಕೆ. ಮಹಲ್ ಜಿ.ಕೆ. ಅಜಿತ್ ವೇದಿಕೆಯಲ್ಲಿ ಪ್ರತಿನಿಧಿ ಸಮ್ಮೇಳನ ನಡೆಯಲಿರು ವುದು. ಧ್ವಜಾರೋಹಣ,ಮಜ್ದೂರ್ ಗೀತೆ, ವಂದೇ ಮಾತರಂ ನೊಂದಿಗೆ ಆರಂಭಗೊಳ್ಳುವ ಸಮ್ಮೇಳನವನ್ನು ಬಿಎಂಎಸ್ ಅಖಿಲ ಭಾರತ ಉಪಾಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಉದ್ಘಾಟಿಸುವರು.  ಬಿಎಂಎಸ್ ಜಿಲ್ಲಾಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು. ಅಪರಾಹ್ನ 2 ಗಂಟೆಗೆ ಸಂಘಟನಾ ಚರ್ಚೆ, 3ಕ್ಕೆ ನೂತನ ಪದಾಧಿಕಾರಿಗಳ ಘೋಷಣೆ, ೩.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

RELATED NEWS

You cannot copy contents of this page