ಬಿಎಂಎಸ್ ಕಾಸರಗೋಡು ಜಿಲ್ಲಾ ಸಮ್ಮೇಳನ ಸಮಾಪ್ತಿ:ಜಿಲ್ಲೆಯ ಹಿಂದುಳಿಯುವಿಕೆಗೆ ಪರಿಹಾರ ಕಾಣಲು ಕಾಸರಗೋಡುಅಭಿವೃದ್ಧಿ ಪ್ಯಾಕೇಜ್ ಘೋಷಿಸಬೇಕು-ಉಣ್ಣಿಕೃಷ್ಣನ್ ಉಣ್ಣಿತ್ತಾನ್

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ರಂಗದಲ್ಲಿ ಹಿಂದುಳಿಯುವಿಕೆಗೆ ಪರಿಹಾರ ಕಾಣಲು ಸರಕಾರ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ  ವಿವಿಧ ಯೋಜನೆಗಳನ್ನು  ಜ್ಯಾರಿಗೊಳಿಸಬೇಕೆಂದು ಬಿಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ. ಬಿಎಂಎಸ್ ಕಾಸರಗೋಡು ಜಿಲ್ಲಾ ಸಮ್ಮೇಳನದ ಭಾಗವಾಗಿ ಕಾಸರಗೋಡಿನಲ್ಲಿ ನಡೆದ ಪ್ರತಿನಿಧಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆರೋಗ್ಯ ರಂಗ ಸಹಿತ  ಜಿಲ್ಲೆ ಭಾರೀ ಸಮಸ್ಯೆಯನ್ನು ಎದುರಿಸುತ್ತಿದೆ. ಜಿಲ್ಲೆಯ 11 ಪಂಚಾಂiiತ್‌ಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ. ಇವರ ಸಮಸ್ಯೆಗಳನ್ನು ಪರಿಹರಿಸಲು  ಸೂಕ್ತ ಯೋಜನೆ ಅಗತ್ಯವಿದೆಯೆಂದು  ಅವರು ತಿಳಿಸಿದರು. 1೦ ವರ್ಷಗಳ ಎಡರಂಗದ ಆಡಳಿತದಲ್ಲಿ ಕೇರಳ 5೦ ವರ್ಷಗಳ ಹಿಂದಕ್ಕೆ ಸಾಗಿದೆ. ಕೊಳ್ಳೆ ತಂಡಕ್ಕೆ ಸಾಧ್ಯವಾದಷ್ಟನ್ನು ಲಪಟಾಯಿಸಲಾಗಿದೆ. ಒಂದು ಟ್ರೇಡ್ ಯೂನಿಯನ್ ನೋಂದಾಯಿಸಲು ಇತರ ರಾಜ್ಯಗಳಲ್ಲಿ ೪೦೦ ರೂಪಾಯಿ  ಆಗಿರುವಾಗ ಕೇರಳದಲ್ಲಿ ಅದು 1೦ ಸಾವಿರ ರೂಪಾಯಿ ಆಗಿದೆ.  ಪ್ರಧಾನಮಂತ್ರಿ ನರೇಂದ್ರಮೋದಿ ಆರಂಭಿಸಿದ ಆತ್ಮನಿರ್ಭರ ಭಾರತ ಯೋಜನೆ ಮೂಲಕ  ಈಗ ಎಲ್ಲಾ ಉತ್ಪನ್ನಗಳು ಭಾರತದಲ್ಲೇ ನಿರ್ಮಾಣವಾಗುತ್ತಿದೆ. ಈ ಹಿಂದೆ 99 ಶೇ.  ಆಮದು ಮಾಡಿಕೊಂಡಿದ್ದ ಮೊಬೈಲ್ ಫೋನ್‌ಗಳು ಇಂದು 99 ಶೇ. ರಫ್ತು ಮಾಡುವ ದೇಶವಾಗಿ ಭಾರತ ಬದಲಾಗಿದೆ. ಅಮೆರಿಕ ಭಾರತದ ಮೇಲೆ  ಸುಂಕ ಹೇರಿದರೂ ಭಾರತ ಚಿಂತೆಗೊಳಗಾಗಿಲ್ಲ. ಭಾರತದ ಇಚ್ಛಾಶಕ್ತಿಯ ಮುಂದೆ ಅಮೆರಿಕ ಇಂದು ತಲೆಬಾಗಿರುತ್ತದೆ. ೨೦೧೪ರ ವರೆಗೆ 11ನೇ ಸ್ಥಾನದಲ್ಲಿದ್ದ ನಮ್ಮ ದೇಶ ಇಂದು ೪ನೇ ಸ್ಥಾನಕ್ಕೆ ತಲುಪಿದೆ. ದೇಶದ ಈ ಪ್ರಗತಿಯನ್ನು ಇಲ್ಲದಾಗಿಸಲು ಕೆಲವು ವ್ಯಕ್ತಿಗಳು ಶ್ರಮಿಸುತ್ತಿದ್ದಾರೆ. ಭಾರತ ಅಭಿವೃದ್ಧಿ ಹೊಂದುತ್ತಿರುವುದು ವಿಪಕ್ಷಗಳು ಸಹಿತ ಹಲವರಿಗೆ ಆತಂಕ ಮೂಡಿಸಿದೆ.  ಎಸ್‌ಐಆರ್ ಕುರಿತು ವ್ಯಕ್ತಪಡಿಸುವ ವಿರೋಧ ಇದಕ್ಕೆ ಉದಾಹರಣೆಯಾಗಿದೆ.1955ರಲ್ಲಿ 35 ಮಂದಿಯಿಂದ ಆರಂಭಿಸಿದ ಬಿಎಂಎಸ್ ಇಂದು ವಿಶ್ವದ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿ ಬೆಳೆದಿದೆ. ಶೂನ್ಯದಿಂದ ಆರಂಭಿಸಿದ ಬಿಎಂಎಸ್ ಇಂದು ಇಡೀ ಜಗತ್ತಿಗೇ ನೇತೃತ್ವ ನೀಡುವ ಕಾರ್ಮಿಕ ಸಂಘಟನೆಯಾಗಿ ಬದಲಾಗಿದೆಯೆಂದು  ಅವರು ತಿಳಿಸಿದರು.

 ಬಿಎಂಎಸ್ ಜಿಲ್ಲಾಧ್ಯಕ್ಷ ಕೆ. ಉಪೇಂದ್ರನ್ ಧ್ವಜಾರೋಹಣ ನಡೆಸಿ ಬಳಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್, ಸ್ವಾಗತ ಸಮಿತಿ ಚೆಯರ್‌ಮೆನ್ ನ್ಯಾಯವಾದಿ ಎ.ಸಿ.ಅಶೋಕ್ ಕುಮಾರ್ ಮೊದಲಾದವರು ಮಾತನಾಡಿದರು. ಟಿ.ಕೃಷ್ಣನ್ ಕೇಳೋತ್, ಮಿನಿ ಶ್ರೀನಿವಾಸನ್, ಸುನಿಲ್ ವಾಳಕ್ಕೋಡ್, ಭರತನ್ ಕಲ್ಯಾಣ್‌ರೋಡ್, ಗೀತಾ ಬಾಲಕೃಷ್ಣನ್ ಎಂಬಿವರು ಠರಾವು ಮಂಡಿಸಿದರು. ಎಂ.ವಿ. ಪ್ರದೀಪ್, ಹರೀಶ್ ಕುದ್ರೆಪ್ಪಾಡಿ, ಶಿವರಾಮನ್, ವಿಶ್ವನಾಥ ಶೆಟ್ಟಿ, ಶೋಭಾ ಬಲ್‌ರಾಜನ್ ಠರಾವನ್ನು ಬೆಂಬಲಿಸಿ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್, ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್, ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್, ಜೊತೆ ಕಾರ್ಯದರ್ಶಿಗಳಾದ ಯಶವಂತಿ ಬೆಜ್ಜ, ಭಾಸ್ಕರನ್ ಪೊಯಿನಾಚಿ, ಗುರುದಾಸ್ ಮಧೂರು ಮೊದಲಾದವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಚಟುವಟಿಕಾ ವರದಿಯನ್ನು, ಕೋಶಾಧಿಕಾರಿ ಬಿ.ಮನೀಶ್ ಆಯ-ವ್ಯಯ ಲೆಕ್ಕ ಮಂಡಿಸಿದರು. ಬಿಎಂಎಸ್ ರಾಜ್ಯ ಸಂಘಟನಾ ಡೆಪ್ಯುಟಿ ಜನರಲ್ ಸೆಕ್ರೆಟರಿ ಸಿ. ಬಾಲಚಂದ್ರನ್ ಪಾಲಕ್ಕಾಡ್ ಸಂಘಟನಾ ಚರ್ಚೆ ನಡೆಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಮಹೇಶ್ ಕುಮಾರ್ ಸಮಾರೋಪ ಭಾಷಣ ನಡೆಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ವಿ. ಬಾಬು ವಂದಿಸಿದರು.

ನೂತನ ಪದಾಧಿಕಾರಿಗಳಾಗಿ ಕೆ. ಉಪೇಂದ್ರನ್ (ಅಧ್ಯಕ್ಷ), ಅನಿಲ್ ಬಿ ನಾಯರ್, ಪಿ. ದಿನೇಶ್, ಸುನಿಲ್ ವಾಳಕ್ಕೋಡ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್ (ಉಪಾಧ್ಯಕ್ಷರು), ಕೆ.ವಿ. ಬಾಬು(ಕಾರ್ಯದರ್ಶಿ), ಲೀಲಾಕೃಷ್ಣನ್, ಪ್ರದೀಪ್ ಕೇಳೋತ್, ಭಾಸ್ಕರನ್ ಪೊಯಿ ನಾಚಿ, ಗುರುದಾಸ್ ಮಧೂರು, ಮಿನಿ ಶ್ರೀನಿವಾಸನ್, ಯಶವಂತಿ ಬೆಜ್ಜ, ಅಜಯನ್ ಪುದಿಯಕಂಡ (ಜೊತೆ ಕಾರ್ಯದರ್ಶಿಗಳು), ಬಿ.ಮನೀಶ್ (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು.ನೂತನ ಪದಾಧಿಕಾರಿಗಳಾಗಿ ಕೆ. ಉಪೇಂದ್ರನ್ (ಅಧ್ಯಕ್ಷ), ಅನಿಲ್ ಬಿ ನಾಯರ್, ಪಿ. ದಿನೇಶ್, ಸುನಿಲ್ ವಾಳಕ್ಕೋಡ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್ (ಉಪಾಧ್ಯಕ್ಷರು), ಕೆ.ವಿ. ಬಾಬು(ಕಾರ್ಯದರ್ಶಿ), ಲೀಲಾಕೃಷ್ಣನ್, ಪ್ರದೀಪ್ ಕೇಳೋತ್, ಭಾಸ್ಕರನ್ ಪೊಯಿ ನಾಚಿ, ಗುರುದಾಸ್ ಮಧೂರು, ಮಿನಿ ಶ್ರೀನಿವಾಸನ್, ಯಶವಂತಿ ಬೆಜ್ಜ, ಅಜಯನ್ ಪುದಿಯಕಂಡ (ಜೊತೆ ಕಾರ್ಯದರ್ಶಿಗಳು), ಬಿ.ಮನೀಶ್ (ಕೋಶಾಧಿಕಾರಿ) ಎಂಬಿವರನ್ನು ಆರಿಸಲಾಯಿತು.

RELATED NEWS

You cannot copy contents of this page