ಕಾಸರಗೋಡು: ಕಾಸರಗೋಡು ನಗರದಲ್ಲಿ ೨೦೦೮ರಲ್ಲಿ ನಡೆದ ಮತೀಯ ಗಲಭೆಯಲ್ಲಿ ಬಿಎಂಎಸ್‌ನ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾಗಿದ್ದ ಕಾಸರಗೋಡು ತಾಲೂಕು ಕಚೇರಿ ಪರಿಸರ ನಿವಾಸಿ ನ್ಯಾಯವಾದಿ ಪಿ. ಸುಹಾಸ್ (38)ರನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರೋಸಿಕ್ಯೂಷನ್ ಪರ ವಾದಿಸಲು ನ್ಯಾಯವಾದಿ ತಲಶ್ಶೇರಿಯ ಪಿ. ಪ್ರೇಮರಾಜನ್ ರನ್ನು ಸರಕಾರ ಸ್ಪೆಷಲ್ ಪ್ರೋಸಿಕ್ಯೂಟರನ್ನಾಗಿ ನೇಮಿಸಿದೆ.
ಈ ಹಿಂದೆ ಬಿಜೆಪಿ ನೇತಾರ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆಯವರನ್ನು ಈ ಪ್ರಕರಣದ ಪರ ವಾದಿಸಲು ಸ್ಪೆಷಲ್ ಪ್ರೋಸಿಕ್ಯೂ ಟರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲ್ಪಟ್ಟ ಹಿನ್ನೆಲೆಯಲ್ಲಿ ನ್ಯಾಯವಾದಿ ಜೋಸೆಫ್ ಥೋಮಸ್‌ರನ್ನು ಸ್ಪೆಷಲ್ ಪ್ರೋಸಿಕ್ಯೂಟರ್ ಆಗಿ ನೇಮಿಸಲಾಗಿತ್ತಾದರೂ ನಂತರ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ತಲಶ್ಶೇರಿ ಬಾರ್‌ನ ಖ್ಯಾತ ನ್ಯಾಯವಾದಿ ಯಾಗಿರುವ ಪಿ. ಪ್ರೇಮರಾಜನ್‌ರನ್ನು ಈಗ ಸ್ಪೆಷಲ್ ಪ್ರೋಸಿಕ್ಯೂಟರನ್ನಾಗಿ ನೇಮಿಸಲಾಗಿದೆ.
2008 ಎಪ್ರಿಲ್ 17ರಂದು ಸಂಜೆ 6 ಗಂಟೆಗೆ ನ್ಯಾಯವಾದಿ ಪಿ. ಸುಹಾಸ್ ನಗರದ ಕೋಟೆ ರಸ್ತೆ ಬಳಿಯಿರುವ ತಮ್ಮ ಕಚೇರಿಗೆ ಹೋಗುತ್ತಿದ್ದ ವೇಳೆ ಅಕ್ರಮಿಗಳ ತಂಡ ಮಾರಕಾಯುಧಗಳೊಂದಿಗೆ ದಾಳಿ ನಡೆಸಿ ಇರಿದು ಗಾಯಗೊಳಿಸಿತ್ತು. ಇದರಿಂದ ಗಂಭೀರ ಗಾಯಗೊಂಡ ಸುಹಾಸ್‌ರನ್ನು ಉನ್ನತ ಮಟ್ಟದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಮೊದಲು ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಇದರಂತೆ ಕಾಸರಗೋಡು ಘಟಕದ ಡಿವೈಎಸ್ಪಿ ಟಿ. ಮಧುಸೂದನನ್ ನೇತೃತ್ವದ ತಂಡ ಈ ಪ್ರಕರಣದ ತನಿಖೆ ಆರಂಭಿಸಿತ್ತು.
ಈ ಪ್ರಕರಣದಲ್ಲಿ ಒಟ್ಟು 7 ಮಂದಿ ಆರೋಪಿಗಳಿದ್ದಾರೆ. ಅದರಲ್ಲಿ 6 ಮಂದಿಯ ವಿರುದ್ಧದ ದೋಷಾ ರೋಪ ಪಟ್ಟಿಯನ್ನು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಈಗಾಗಲೇ ಸಲ್ಲಿಸಿದೆ. ೭ನೇ ಆರೋಪಿಯನ್ನು ಗುರುತಿಸಲು ಈತನಕ ಸಾಧ್ಯವಾಗಿಲ್ಲ. ನ್ಯಾಯವಾದಿ ಸುಹಾಸ್ ಕೊಲೆ ಆರೋಪಿಗಳ ಪರ ವಾದಿಸದೇ ಇರುವ ತೀರ್ಮಾನವನ್ನು ಕಾಸರಗೋಡು ಬಾರ್ ಅಸೋಸಿಯೇಶನ್ ತೀರ್ಮಾನವನ್ನು ಕೈಗೊಂಡಿತ್ತು. ಅದರಿಂದಾಗಿ ಈ ಪ್ರಕರಣದ ವಿಚಾರ ಣೆಯನ್ನು ಕಾಸರಗೋಡಿನಿಂದ ತಲಶ್ಶೇರಿ ಸೆಶನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಇದರಂತೆ ಪ್ರಕರಣದ ವಿಚಾರಣೆ ತಲಶ್ಶೇರಿ ಸೆಶನ್ಸ್ ನ್ಯಾಯಾಲಯದಲ್ಲಿ 2024 ದಶಂಬರ 1ರಂದು ಆರಂಭಗೊಂ ಡಿತು. ಈ ವೇಳೆ ಈ ಪ್ರಕರಣದ ೭ನೇ ಆರೋಪಿಯನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಯ ಅಗತ್ಯವಿದೆಯೆಂದು ಆಗ್ರಹಿಸಿ ಕ್ರೈಂ ಬ್ರಾಂಚ್ ನ್ಯಾಯಾಲ ಯಕ್ಕೆ ಅರ್ಜಿ ಸಲ್ಲಿಸಿತ್ತು. ಅದಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು. ಇದರಿಂದಾಗಿ ಈ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದೆ.







