ಕುಂಬಳೆ: ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಸೆ.17ರ ಕಾರ್ಮಿಕ ದಿನಾಚರಣೆಯನ್ನು ಬಿಎಂಎಸ್ ರಾಜ್ಯದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದು, ಇದರಂತೆ ಕುಂಬಳೆ ವಲಯಸಮಿತಿ ಸಭೆ ಪಾದಯಾತ್ರೆ ಹೋರಾಟ ನಡೆಸಲು ತೀರ್ಮಾನಿಸಿದೆ. ಇಲ್ಲಿನ ಜಯಮಾರುತಿ ವ್ಯಾಯಾಮಶಾಲೆಯ ವಠಾರದಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಕೆ. ಬಂಬ್ರಾಣ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಕುಂಬಳೆ ಬಿಎಂಎಸ್ ಪಂ. ಸಮಿತಿ ಅಧ್ಯಕ್ಷ ಶಿವಾನಂದ ರಾವ್, ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು.
