ಚೆನ್ನೈ: ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶನಲ್ ಜ್ಯುವೆಲರ್ಸ್ನ ಚೆನ್ನೈನಲ್ಲಿನ ತನ್ನ ಎರಡನೇ ಶೋ ರೂಮ್ ಆವಡಿಯಲ್ಲಿ ಉದ್ಘಾಟನೆ ಗೊಂಡಿತು. ಶೋರೂಮ್ ಅನ್ನು ತಮಿಳುನಾಡು ಸಚಿವ ಎಸ್.ಎಂ. ನಾಸರ್, ಗಿನ್ನೆಸ್ ದಾಖಲೆ ಹೊಂದಿದ ಬೋಚೆ , ಚಲನಚಿತ್ರ ತಾರೆ ಕಾಜಲ್ ಅಗರ್ವಾಲ್ ಜಂಟಿಯಾಗಿ ಉದ್ಘಾಟಿ ಸಿದರು. ಚಿನ್ನದ ಆಭರಣಗಳ ಮೊದಲ ಮಾರಾಟವನ್ನು ಆವಡಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಜಿ. ಉದಯಕುಮಾರ್ ನಿರ್ವಹಿಸಿದರು. ಮಾಜಿ ಸಚಿವ ಎಸ್. ಅಬ್ದುಲ್ ರಹೀಮ್ ಸನ್ ಪ್ರಕಾಶ್ (ಕಾರ್ಯದರ್ಶಿ, ಆವಡಿ ನಗರ, ಡಿಎಂಕೆ), ಜಿ. ರಾಜೇಂದ್ರನ್ (ವಲಯ ಅಧ್ಯಕ್ಷರು, ಆವಡಿ ಮುನ್ಸಿಪಲ್ ಕಾರ್ಪೊರೇಷನ್), ಗೀತಾ ಯುವರಾಜ್ (ವಾರ್ಡ್ ಕೌನ್ಸಿಲರ್, ಆವಡಿ ಮುನ್ಸಿಪಲ್ ಕಾರ್ಪೊರೇಷನ್) ಶುಭಾಶಯ ಕೋರಿದರು. ಅನಿಲ್ ಸಿ.ಪಿ. (ಜಿ.ಎಂ. ಮಾರ್ಕೆಟಿಂಗ್, ಬೋಬಿ ಚೆಮ್ಮನ್ನೂರ್ ಇಂಟರ್ನ್ಯಾ ಷನಲ್ ಗ್ರೂಪ್) ಸ್ವಾಗತಿಸಿದರು. ಜೋಜಿ ಎಂ.ಜೆ. ಕೃತಜ್ಞತೆ ಸಲ್ಲಿಸಿದರು. ಉದ್ಘಾಟನಾ ಸಮಾರಂಭದಲ್ಲಿ, ಆವಡಿಯ ಆಯ್ದ ಬಡ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಒದಗಿಸಿದ ಆರ್ಥಿಕ ಸಹಾಯವನ್ನು ವಿತರಿಸಲಾಯಿತು. ಬೋಚೆ ಅವರ ಇನ್‌ಸ್ಟಾಗ್ರಾಮ್ ಪುಟವನ್ನು ಅನುಸರಿಸಿ ‘ಉಚಿತ ಚಿನ್ನದ ಬಿಸ್ಕತ್ತು ಸ್ಪರ್ಧೆ’ಯಲ್ಲಿ ಭಾಗವಹಿಸಿದವರಲ್ಲಿ ಆಯ್ಕೆಯಾದ ಶಮ್ನಾದ್ ಶಾಹಿ ಅವರಿಗೆ ಬೋಚೆ ಚಿನ್ನದ ಬಿಸ್ಕತ್ತು ನೀಡಿದರು.
ಉದ್ಘಾಟನೆಯ ಭಾಗವಾಗಿ ಗ್ರಾಹಕರಿಗೆ ಹಲವು ಕೊಡುಗೆಗಳು ಮತ್ತು ಉಡುಗೊರೆಗಳನ್ನು ಏರ್ಪಡಿಸಲಾಗಿದೆ. ಅನ್‌ಕಟ್ 916 ಚಿನ್ನದ ಆಭರಣಗಳಿಗೆ ಭಾರತದ ಅತ್ಯಂತ ಕಡಿಮೆ ಸಂಸ್ಕರಣಾ ಶುಲ್ಕ, ಅಮೂಲ್ಯ ಆಭರಣಗಳಿಗೆ ಸಂಸ್ಕರಣಾ ಶುಲ್ಕದಲ್ಲಿ 50% ವರೆಗೆ ರಿಯಾಯಿತಿ, ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಅನ್‌ಕಟ್ ವಜ್ರದ ಆಭರಣಗಳ ಖರೀದಿಯ ಮೇಲೆ ಚಿನ್ನದ ನಾಣ್ಯ ಉಡುಗೊರೆ, ಏರುತ್ತಿರುವ ಚಿನ್ನದ ಬೆಲೆಗಳ ವಿರುದ್ಧ ರಕ್ಷಣೆ ಒದಗಿಸುವುದು, ಮುಂಗಡ ಬುಕಿಂಗ್ ಕೊಡುಗೆ ಮತ್ತು ಪ್ರತಿ ಖರೀದಿಯೊಂದಿಗೆ ಖಾತರಿಯ ಉಡುಗೊರೆ ಇದೆ ಎಂದು ಸಂಬAಧಪಟ್ಟವರು ತಿಳಿಸಿದ್ದಾರೆ.







