ಹೊಸದುರ್ಗ: ಪಯ್ಯನ್ನೂರು ಎಫ್.ಸಿ.ಐ ಗೋದಾಮಿನ ತಲೆ ಹೊರೆ ಕಾರ್ಮಿಕ ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಅನ್ನೂರು ಪಡಿಂಞಾರೆಕ್ಕೆ ರೆಯ ತಾಯಂಬತ್ತ್ ರಾಜೇಶ್ (45) ಮೃತಪಟ್ಟ ವ್ಯಕ್ತಿ. ಪಯ್ಯನ್ನೂರು ಮುರಿಕೊವ್ವಲ್ ಉಷಾ ರೋಡ್‌ನ ಚರಂಡಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ನಿನ್ನೆ ಮಧ್ಯಾಹ್ನ ಮೃತ ದೇಹ ಕಂಡ ನಾಗರಿಕರು ಪೊಲೀ ಸರಿಗೆ ಮಾಹಿತಿ ನೀಡಿದ್ದರು. ಪಯ್ಯ ನ್ನೂರು ಪೊಲೀಸರು ತಲುಪಿ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ತಲುಪಿ ಸಿದರು. ಇದೇ ವೇಳೆ ರಾಜೇಶ್‌ರ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾರ್‌ನಲ್ಲಿ ತಂಡವೊಂದು ರಾಜೇಶ್ ರೊಂದಿಗೆ ವಾಗ್ವಾದ ನಡೆಸಿತ್ತೆಂದೂ ಅದೇ ತಂಡ ಹಿಂಬಾಲಿಸಿ ತಲುಪಿ ಹಲ್ಲೆಗೈದಿರುವುದಾಗಿ ಸಂಬಂಧಿಕರು ಹೇಳುತ್ತಿದ್ದಾರೆ. ಅನ್ನೂರು ಪಡಿಂಞಾರೆಕೆರೆಯ ದಿ| ಅಂಬು-ತಾಯಂಬತ್ತ್ ಕುಂಜಿರಿ ದಂಪತಿಯ ಪುತ್ರನಾದ ರಾಜೇಶ್, ಸಹೋದರ-ಸಹೋದರಿಯರಾದ ಟಿ. ಕುಮಾರಿ, ಟಿ. ರಾಜೀವನ್ (ಪಯ್ಯನ್ನೂರು ಎಫ್.ಸಿ.ಟಿ ಲೋಡಿಂಗ್ ಕಾರ್ಮಿಕ), ಟಿ. ರತೀಶ್(ನಿರ್ಮಾಣ ಕಾರ್ಮಿಕ), ಟಿ. ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
