ತಾತ್ಕಾಲಿಕ ಕಂಡಕ್ಟರ್ ಆಗಿದ್ದ ಬಳ್ಳೂರು ನಿವಾಸಿ ಮೃತದೇಹ ಕೆರೆಯಲ್ಲಿ ಪತ್ತೆ

ಬಾಯಾರು: ಬಳ್ಳೂರು ತೆಂಕಮಜಲು ನಿವಾಸಿ ಮೋಹನ ನಾಯ್ಕ (50)ರ ಮೃತದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದರು. ಮಧ್ಯಾಹ್ನ ವೇಳೆ ಮನೆ ಬಳಿಯ ತೋಟದ ಕೆರೆ ಬಳಿಯಲ್ಲಿ ಚಪ್ಪಲಿ ಕಂಡುಬAದಿದೆ. ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಇವರು ಕೆರೆಗೆ ಹಾರಿ ಆತ್ಮಹತ್ಯೆಗೈದಿರುವುದಾಗಿ ಅಂದಾಜಿಸಲಾಗಿದೆ. ಈ ಹಿಂದೆ ಹಲವು ತಿಂಗಳುಗಳ ಕಾಲ ಕೇರಳ ಸಾರಿಗೆ ಸಂಸ್ಥೆಯ ಕಾಸರಗೋಡು ಡಿಪ್ಪೋದ ಬಸ್‌ನಲ್ಲಿ ತಾತ್ಕಾಲಿಕ ಕಂಡಕ್ಟರ್ ಆಗಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಮೃತರು ಅವಿವಾಹಿತರಾಗಿದ್ದು, ತಂದೆ ದಿ| ಈಶ್ವರ ನಾಯ್ಕ, ತಾಯಿ ದಿ| ಶಾರದ, ಸಹೋದರರಾದ ದೇವಪ್ಪ, ದಿವಾಕರ, ಅಶೋಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

You cannot copy contents of this page