ಜಿರಳೆನಾಶಕ ಚೋಕ್ ಸೇವಿಸಿ ಅಸ್ವಸ್ಥಗೊಂಡ ಬಾಲಕ

ಕಾಸರಗೋಡು: ಜಿರಳೆಗಳನ್ನು ಓಡಿಸಲು ಉಪಯೋಗಿಸುವ ಚೋಕ್ ಸೇವಿಸಿ ಅಸ್ವಸ್ಥಗೊಂಡ ೧೫ರ ಹರೆಯದ ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನಲ್ಲಿ ವಾಸಿಸುವ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದು, ಈತನನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಾಂಶವುಳ್ಳ  ಚೋಕ್  ಬಾಲಕನ ಹೊಟ್ಟೆಗೆ ಹೇಗೆ ತಲುಪಿದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page