ಬಾಲಕನಿಗೆ ಕಿರುಕುಳ: ಸೆರೆಗೀಡಾದವರ ಸಂಖ್ಯೆ 10ಕ್ಕೆ; ತಲೆಮರೆಸಿಕೊಂಡ ಯೂತ್‌ಲೀಗ್ ನೇತಾರನ ಪತ್ತೆಗಾಗಿ ಶೋಧ

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡ 16ರ ಹರೆಯದ ಬಾಲಕನಿಗೆ ಸಲಿಂ ಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಪಯ್ಯನ್ನೂರು ಕೋರೋತ್‌ನಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ನೌಕರನಾದ ಗಿರೀಶ್ (47) ಎಂಬಾತನನ್ನು ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸೆರೆಗೀಡಾದವರ ಸಂಖ್ಯೆ 10ಕ್ಕೇರಿದೆ. ಬೇಕಲ ಎಇಒ ಪಡನ್ನದ ವಿ.ಕೆ. ಸೈನುದ್ದೀನ್ (52), ಪಡನ್ನಕ್ಕಾಡ್‌ನ ರಂಸಾನ್ (64), ಆರ್‌ಪಿಎಫ್ ನೌಕರ ಪಿಲಿಕ್ಕೋಡ್ ಎರವ್‌ನ ಚಿತ್ರರಾಜ್ (48), ತೃಕ್ಕರಿಪುರ ವಳುವಕ್ಕಾಡ್‌ನ ಕುಂಞಹಮ್ಮದ್ (55), ಚಂದೇರದ ಅಪ್ಸಲ್ (23), ತೃಕ್ಕರಿಪುರ ಪೂಚೋಲ್‌ನ ನಾರಾಯಣನ್ (60), ತೃಕ್ಕರಿಪುರ ವಡಕ್ಕೇ ಕೊವ್ವಲ್‌ನ ರಯೀಸ್ (30), ವೆಳ್ಳಚ್ಚಾಲ್‌ನ ಸುಕೇಶ್ (30), ಚೀಮೇನಿಯ ಶಿಜಿತ್ (36) ಎಂಬಿವರನ್ನು ನಿನ್ನೆ ಬಂಧಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

ಕಿರುಕುಳ ಪ್ರಕರಣದಲ್ಲಿ ಆರೋ ಪಿಯಾದ ವಿಷಯ ತಿಳಿದು ತಲೆಮರೆ ಸಿಕೊಂಡ ಮುಸ್ಲಿಂ ಲೀಗ್ ಪ್ರಾದೇಶಿಕ ನೇತಾರ ತೃಕ್ಕರಿಪುರ ವಡಕ್ಕುಂಬಾಟ್‌ನ ಸಿರಾಜುದ್ದೀನ್ (46) ಎಂಬಾತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ ಸೆರೆಗೀಡಾದ ಅಪ್ಸಲ್ ವಿರುದ್ಧ ಇನ್ನೊಂದು ಪ್ರಕರಣವನ್ನು  ಚಂದೇರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಬೇರೊಬ್ಬ ವ್ಯಕ್ತಿಯೊಂದಿಗೆ  ಸಹಕರಿಸು ವಂತೆ ಬಾಲಕನನ್ನು ಒತ್ತಾಯಿಸಿದ ಆರೋಪದಂತೆ ಅಪ್ಸಲ್ ವಿರುದ್ಧ  ಕೇಸು ದಾಖಲಿಸಲಾಗಿದೆ. ಇದರೊಂದಿಗೆ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 16ರ ಹರೆಯದ ಬಾಲಕನಿಗೆ ಸಲಿಂಗ ರತಿ ಕಿರುಕುಳ ನೀಡಿದ ಘಟನೆಯಲ್ಲಿ ಪೊಲೀಸರು ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ 10ಕ್ಕೇರಿದೆ.

RELATED NEWS

You cannot copy contents of this page