ಕಾಸರಗೋಡು: 11ರ ಹರೆಯದ ವಿದ್ಯಾರ್ಥಿಯನ್ನು ಸಲಿಂಗರತಿ ದೌರ್ಜನ್ಯಕ್ಕೆ ಒಳಪಡಿಸಿದ ಘಟನೆಯಲ್ಲಿ 62ರ ಹರೆಯದ ವ್ಯಕ್ತಿ ಸೆರೆಯಾಗಿದ್ದಾನೆ. ಪರಪ್ಪ ಕ್ಲಾಯಿಕೋಡ್ ನಿವಾಸಿ ಅಬ್ದುಲ್ ರಜಾಕ್ನನ್ನು ಪೋಕ್ಸೋ ಕಾನೂನು ಪ್ರಕಾರ ವಳ್ಳೇರಿಕುಂಡ್ ಸಿ.ಐ. ನಳಿನಾಕ್ಷ ಬಂಧಿಸಿದ್ದಾರೆ. ಕಳೆದ ಆದಿತ್ಯವಾರ ಘಟನೆ ನಡೆದಿದೆ. ಶಾಲೆಗೆ ತೆರಳಿ ಹಿಂತಿರುಗುತ್ತಿದ್ದ ಬಾಲಕನನ್ನು ಜನವಾಸವಿಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತಿಕ್ರಮಿಸಿ ದೌರ್ಜನ್ಯಗೈದಿರುವುದಾಗಿ ಕೇಸು ದಾಖಲಿಸಲಾಗಿದೆ. ಹಲವು ಬಾರಿ ಈ ರೀತಿ ವರ್ತಿಸಿರುವುದಾಗಿಯೂ ಹೇಳಲಾಗುತ್ತಿದೆ. ಬಾಲಕ ಮನೆಗೆ ತಲುಪಿ ವಿಷಯ ಹೇಳಿದ ಹಿನ್ನೆಲೆಯಲ್ಲಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ನಿನ್ನೆ ಸಂಜೆ ಬಂಧಿಸಲಾಗಿದೆ. ಇಂದು ನ್ಯಾಯಾಲಯದಲ್ಲಿ ಹಾಜರುಪಡಿಲಾಗುವುದು. ಈತ ಕಳೆದ ವರ್ಷ ಇನ್ನೋರ್ವ ಬಾಲಕನಿಗೆ ದೌರ್ಜನ್ಯ ಗೈದ ಪ್ರಕರಣದಲ್ಲಿ ಸೆರೆಯಾಗಿ ಜೈಲುವಾಸ ಅನುಭವಿಸಿದ್ದನು.







