ಕುಂಬಳೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಮೇರೆಗೆ ಕುಂಬಳೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಪ್ರಾಯಪೂರ್ತಿಯಾಗದವರ ವಾಹನ ಚಾಲನೆ ಸಹಿತ ವಿವಿಧ ಕಾನೂನು ಉಲ್ಲಂಘಿಸಿ ನಡೆಯುವ ಚಟುವಟಿ ಕೆಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಂತೆ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಪ್ರಾಯಪೂರ್ತಿ ಯಾಗದ ಮಕ್ಕಳು ಚಲಾಯಿಸುತ್ತಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆಯ ಲಾಗಿದೆ.
ಈ ಸಂಬಂಧ ಮಕ್ಕಳ ಹೆತ್ತವರಾದ ಇಚ್ಲಂಗೋಡು ಪಡತ್ತೂರು ಹೌಸ್‌ನ ಆಯಿಶತ್ ಸಬೂರ (36), ಸೀತಾಂಗೋಳಿ ಮುಖಾರಿಕಂಡದ ಸುಹರಾ ಎಂ.ಎ (45), ಕುಂಟಂಗೇ ರಡ್ಕದ ಮೊಹಮ್ಮದ್ ಖಾಸಿಂ (47), ಕೊಡ್ಯಮ್ಮೆಯ ಯೂಸಫ್ (51) ಎಂಬಿವರ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






