ಮಂಜೇಶ್ವರ: ಸಹೋದರ ಪುತ್ರಿಯನ್ನು ಪ್ರೀತಿಸುತ್ತಿದ್ದ ಬಗ್ಗೆ ಪ್ರಶ್ನಿಸಿದ ವಿರೋಧದಿಂದ ಸಹೋದರರಾದ ಮೂರು ಮಂದಿಗೆ ತಂಡವೊಂದು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ತಿಂಗಳ 28ರಂದು ಮುಂಜಾನೆ 4.30ಕ್ಕೆ ಉಪ್ಪಳ ಪಾರೆಕಟ್ಟೆ ಎಂಬಲ್ಲಿ ದೂರುದಾರನಾದ ಬಂದ್ಯೋಡು ಬೀಚ್ ರಸ್ತೆ ನಿವಾಸಿ ಉಮ್ಮರ್ ಎಂ.ಎಸ್ (55) ಎಂಬವರು ತಮ್ಮಿಬ್ಬರು ಸಹೋದರರಾದ ಮೂಸ ಬಿ.ಎಂ (52), ಮುನೀರ್ ಬಿ.ಎನ್ (50)ರೊಂದಿಗಿರುವಾಗ ಆರೋಪಿ ಪತ್ವಾಡಿ ನಿವಾಸಿ ಮುನಾವಿರ್ (22)ನ ನೇತೃತ್ವದಲ್ಲಿ 21 ಮಂದಿಯ ತಂಡ ಕೈಗಳಿಂದ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದಿದೆಯೆಂದು ದೂರಲಾಗಿದೆ. ಉಮ್ಮರ್ ನೀಡಿದ ದೂರಿನಂತೆ ೨೧ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಾಯಾಳುಗಳನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
