ಹಿರಿಯ ಬಸ್ ಮಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋ ಡಿನ ಹಿರಿಯ ಬಸ್ ಮಾಲಕರ ಪೈಕಿ ಒಬ್ಬರಾದ ಗೋಡ್‌ಫ್ರೇ ಡಿ’ಸೋಜಾ (78) ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಚೆಂಗಳ ಸಂತೋಷ್‌ನಗರದ ಖಾದರ್ ಹಾಜಿ ಕ್ವಾರ್ಟರ್ಸ್‌ನಲ್ಲಿ ಇವರು ವಾಸಿಸುತ್ತಿದ್ದರು. ನಿನ್ನೆ ಸಂಜೆ ೬ ಗಂಟೆ ವೇಳೆ ಕ್ವಾರ್ಟರ್ಸ್‌ನ ಬೆಡ್‌ರೂಂನ  ಮಂಚದಲ್ಲಿ ಇವರು ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂ ದಿದ್ದರು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಹಲವು ವರ್ಷ ಗಳಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದರು. ಇವರ ಪತ್ನಿ ಪೌಲಿನ್ ಈ ಹಿಂದೆ ನಿಧನರಾಗಿ ದ್ದಾರೆ. ಪುತ್ರ ಸಿಲ್ವಸ್ಟನ್ ಡಿ’ಸೋಜಾ ಹಾಗೂ ಸೊಸೆ ಸ್ಮಿತ ಕೊಲ್ಲಂನಲ್ಲಿ ವಾಸಿಸುತ್ತಿದ್ದಾರೆ.  ಗೋಡ್ ಫ್ರೇ ಡಿ’ಸೋಜಾ ಮೂಲತಃ ಮಂಗಳೂ ರು ನಿವಾಸಿಯಾಗಿದ್ದಾರೆ.  ಘಟನೆ ಬಗ್ಗೆ ವಿದ್ಯಾನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page