ಕಾಸರಗೋಡು: ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರು ಜಂಟಿಯಾಗಿ ಮುಷ್ಕರ ಸಮಿತಿ ನೇತೃತ್ವದಲ್ಲಿ ಸಂಜೆ ಧರಣಿ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು.
ಬೀದಿ ವ್ಯಾಪಾರಿಗಳನ್ನು ಪುನರುದ್ಧರಿ ಸಲು ನಿರ್ಮಿಸಿದ ಅಂಗಡಿ ಕೊಠಡಿಗಳ ಮುಂಭಾಗದಲ್ಲಿ ಸಂರಕ್ಷಣೆ ಬೇಲಿ ನಿರ್ಮಿಸಬೇಕು, ಬಸ್‌ಗಳಿಗೆ ಪಾರ್ಕ್ ಮಾಡಲು ಅಗತ್ಯದ ಸೌಕರ್ಯ ಏರ್ಪಡಿಸಬೇಕು, ಪ್ರಯಾಣಿಕರಿಗೆ ಉಪಕಾರಪ್ರದವಾಗುವ ಇನ್‌ಫರ್ಮೇ ಶನ್ ಸೆಂಟರ್ ಪುನರ್ ಸ್ಥಾಪಿಸಬೇಕು, ಲಗೇಜ್‌ಗಳನ್ನು ಇರಿಸಲಿರುವ ಕ್ಲೋಕ್ ರೂಂ ಪುನರ್‌ಸ್ಥಾಪಿಸಬೇಕು, ಮಹಿಳೆ ಯರಿಗಿರುವ ವಿಶ್ರಾಂತಿ ಕೇಂದ್ರವನ್ನು ನೆಲೆ ನಿಲ್ಲಿಸಬೇಕು, ಬಸ್ ನಿಲ್ದಾಣದಲ್ಲಿ ಜಾನು ವಾರುಗಳು ಬರದಂತೆ ತಡೆಗಟ್ಟಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸಂಜೆ ಧರಣಿ ನಡೆಸಲಾಯಿತು. ಕಾಸರಗೋಡು ಜಿಲ್ಲಾ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಅಧ್ಯಕ್ಷತೆ ವಹಿಸಿದರು. ನಗರಸಭೆಯ ವಿಪಕ್ಷ ಮುಖಂಡ ಪಿ. ರಮೇಶ್ ಮುಖ್ಯ ಅತಿಥಿಯಾಗಿದ್ದರು. ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇ ಶನ್ ಜಿಲ್ಲಾ ಕಾರ್ಯದರ್ಶಿ ಟಿ. ಲಕ್ಷ್ಮ ಣನ್, ಉಪಾಧ್ಯಕ್ಷ ಕೆ.ಎನ್. ಬಾಲ ಕೃಷ್ಣನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್, ಪಿ.ಎ. ಮೊಹಮ್ಮದ್ ಕುಂಞಿ ಮಾತನಾಡಿದರು. ಕಾಸರಗೋಡು ತಾಲೂಕು ಬಸ್ ಆಪರೇಟರ್ಸ್ ಫೆಡರೇಶನ್ ಕಾರ್ಯದರ್ಶಿ ಪಿ.ಎ. ಮುಹಮ್ಮದ್ ಕುಂಞಿ ಸ್ವಾಗತಿಸಿದರು.