ನೀರ್ಚಾಲು: ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಯಾಗಿರುವ ಅರುಣ್ ಕುಮಾರ್ ಬಿ (47) ಕುಸಿದುಬಿದ್ದು ಮೃತಪಟ್ಟರು. ಮುಂಡಿತ್ತಡ್ಕ ನಿವಾಸಿಯಾದ ಇವರು ನೀರ್ಚಾಲು ಬಳಿಯ ಬುರುಡಡ್ಕ ದಲ್ಲಿ ವಾಸವಾಗಿದ್ದರು. ನೀರ್ಚಾಲು ಕೆಳಗಿನ ಪೇಟೆಯಲ್ಲಿರುವ ಲಕ್ಷ್ಮಿ ಸ್ಟೋರ್‌ನ ಮಾಲಕನಾಗಿದ್ದಾರೆ. ನಿನ್ನೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ದಿ|ಐತ್ತಪ್ಪ ನಾಯ್ಕ್ ಎಂಬವರ ಪುತ್ರನಾದ ಮೃತರು ತಾಯಿ ಸಾವಿತ್ರಿ, ಪತ್ನಿ ರಾಜೇಶ್ವರಿ,ಮಕ್ಕಳಾದ ಅಮೃತ್, ಅಶ್ವಿನಿ, ಸಹೋದರರಾದ ಜಗದೀಶ್, ದಾಮೋದರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






