ಕುಂಬಳೆ: ಕುಂಬಳೆ- ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪ ಭಾಸ್ಕರನಗರದಲ್ಲಿ ಇಂದು ಬೆಳಿಗ್ಗೆ ಕಾರು ಅಪಘಾತವುಂಟಾಗಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಕುಂಬಳೆಯಿಂದ ಮುಳ್ಳೇರಿಯ ಭಾಗಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಮೋರಿಸಂಕದ ಕೆಳಗಿನ ಹೊಂಡಕ್ಕೆ ಮಗುಚಿ ಬಿದ್ದಿದೆ. ಬೆಳ್ಳೂರು ನಿವಾಸಿಗಳಾದ ಇಬ್ರಾಹಿಂ, ನೌಶಾದ್, ಉನೈಸ್ ಸಹಿತ ನಾಲ್ಕು ಮಂದಿ ಕಾರಿನಲ್ಲಿದ್ದರು. ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಘಟನೆ ತಿಳಿದು ತಲುಪಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳು ಕುಂಬಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಈಗಾಗಲೇ ಭಾಸ್ಕರನಗರದಲ್ಲಿ ಹಲವು ವಾಹನಗಳು ಅಪ ಘಾತಕ್ಕೀಡಾಗಿವೆ. ಇದರಿಂದ ಹಲವರು ಗಾಯಗೊಂಡಿದ್ದಾರೆ.